ಬಳ್ಳಾರಿ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಬಳ್ಳಾರಿ ಜಿಲ್ಲಾ ವತಿಯಿಂದ ಧ್ವಜಾರೋಹಣ ಸಮಾರಂಭವನ್ನು ಹೊಳಗುಂದ ರೈತರು ನೆರವೇರಿಸಿದರು. ಗಣರಾಜ್ಯೋತ್ಸವವನ್ನು ಹೊಳಗುಂದ ಗ್ರಾಮದ ರೈತನ ಹೊಲದಲ್ಲಿ ಎಸ್ಸೆಸ್ಸೆಫ್ ಬಳ್ಳಾರಿ ಜಿಲ್ಲಾ ವತಿಯಿಂದ ಹಮ್ಮಿ ಕೊಳ್ಳಲಾಗಿತ್ತು.
ಎಸ್ಸೆಸ್ಸೆಫ್ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿವರ್ಷ ಆಚರಿಸುವ ಗಣರಾಜ್ಯೋತ್ಸವ ಏಕೆ ಈ ವರ್ಷ ವಿಶೇಷವಾಗಿ ಹೊಲದಲ್ಲಿ ಆಚರಿಸುವ ಕಾರಣ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ರೈತರಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದೊಂದಿಗೆ ಆಚರಿಸಲಾಯಿತು. ಸಿಯಾರುದ್ದೀನ್ ಹಿಮಮಿ ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ರೈತರಾದ ಕೆ.ಪೀರ್ ಸಾಬ್,ಎಂ.ಪಿ.ಹುಸೈನ್ ಪೀರ್, ಚಿನ್ನಗಿಸಾಬ್, ಸಾಬೇಶ್,ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಸಖಾಫಿ ಕುಡತಿನಿ, ಜೊತೆ ಕಾರ್ಯದರ್ಶಿ ಶಿಯಾರುದ್ದೀನ್ ಹಿಮಮಿ ಹೊಳಗುಂದ, ಪೀರಾಸಾಬ್ ಬೂದುಗುಪ್ಪ, ಇತರರು ಉಪಸ್ಥಿತರಿದ್ದರು.
ಇನ್ನಷ್ಟು ಸುದ್ದಿಗಳು
ಜಾಮಿಯಾ ಇಹ್ಯಾ’ಉಸ್ಸುನ್ನ ಮಲಪ್ಪುರಂ: ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಶನ್ ಕೆ.ಎಸ್.ಎ ಗೆ ನವ ಸಾರಥ್ಯ
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕಾಜೂರಿಗೆ ಇಂದು ಎಪಿ ಉಸ್ತಾದ್
ಕೆಸಿಎಫ್ ನ್ಯಾಷನಲ್ ಪ್ರತಿಭೋತ್ಸವ-2021- ಸತತ ಮೂರನೇ ಬಾರಿಯೂ ಶಾರ್ಜಾ ಝೋನ್ ಚಾಂಪಿಯನ್
ಮುಡಿಪು ಎಡ್ಯುಪಾರ್ಕ್ನಲ್ಲಿ ಅರಳಿದ ಪ್ರತಿಭೆ
ಮಂಗಳೂರು ಝೋನ್ ಸುನ್ನೀ ಜಂಇಯ್ಯತುಲ್ ಉಲಮಾ ನೂತನ ಸಮಿತಿ ಅಸ್ತಿತ್ವಕ್ಕೆ