ಬದ್ರಿಯಾ ಜಮಾ ಮಸ್ಜಿದ್ ಕುಲಾಲ್ ನಲ್ಲಿ 72 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಮಾತ್ ಅಧ್ಯಕ್ಷರಾದ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಉಂಡಾರ್ ಉದ್ಘಾಟನೆಗೈದು ಸ್ಥಳೀಯ ಖತೀಬ್ ಮಸ್ಊದ್ ಸಅದಿ
ದುಆ ಮತ್ತು ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಪ್ರ.ಕಾರ್ಯದರ್ಶಿ ಅಬ್ದುಲ್ ಕರೀಂ ಅಬ್ದುಲ್ಲ ಕುಲಾಲು , ಅಶ್ರಫ್ ಜೋಕಟ್ಟೆ ,ಸಂಶೀರ್ KCF ಸದಸ್ಯ, ಅಬ್ದುಲ್ ರಝಾಕ್ ಹನೀಫಿ, ಹಾಗೂ,SYS,SSF,SBS, ಕಾರ್ಯಕರ್ತರು ಭಾಗವಹಿಸಿದ್ದರು ಕೊನೆಯಲ್ಲಿ ರಾಷ್ಟ್ರಗೀತೆ ಮತ್ತು SBS ಕಾರ್ಯದರ್ಶಿ ಶಕೀಲ್ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.