ಮಂಗಳೂರು: ಬಸ್ ನಲ್ಲಿ ಕುಳಿತಿದ್ದಾಗ ವ್ಯಕ್ತಿಯೋರ್ವ ಕಿರುಕುಳ ನೀಡಿದ ಬಗ್ಗೆ ಯುವತಿಯೊಬ್ಬರು ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ ಹುಸೇನ್ (41) ಬಂಧಿತ ಕಾಮುಕ. ಜನವರಿ 14 ರಂದು ಯುವತಿ ದೇರಳಕಟ್ಟೆಯಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಆಕೆಯ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಹುಸೇನ್ ಆಕೆಗೆ ಕಿರುಕುಳ ನೀಡಿದ್ದ.
ಪಕ್ಕದಲ್ಲಿ ಕುಳಿತು ಆರೋಪಿ ಹುಸೇನ್ ಯುವತಿಗೆ ದೈಹಿಕ ಕಿರುಕುಳ ನೀಡಿದ್ದ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ ಮೇಲೆ ಬಸ್ ನಿಂದ ಇಳಿದಿದ್ದ. ನಂತರ ಮತ್ತೊಂದು ಬಸ್ ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಕಿರುಕುಳ ನೀಡಿದ್ದ. ಈ ವೇಳೆ ಫೋಟೋ ತೆಗೆದು ವೈರಲ್ ಮಾಡೋದಾಗಿ ಯುವತಿ ಎಚ್ಚರಿಸಿದ್ದರೂ ಆತ ಚಾಳಿ ಬಿಟ್ಟಿರಲಿಲ್ಲ.
ಯುವತಿ ಆತನ ಪೋಟೋ ತೆಗೆದಾಗ ಹುಸೇನ್ ಫೋಟೋ ಗೆ ನಿರ್ಲಜ್ಜೆಯಿಂದ ಪೋಸ್ ಕೊಟ್ಟಿದ್ದ. ಇದಾದ ಬಳಿಕವೂ ತನ್ನ ಅನುಚಿತ ವರ್ತನೆ ಮುಂದುವರಿಸಿದ್ದ. ಇತರ ಪ್ರಯಾಣಿಕರ ಎದುರೇ ಆರೋಪಿಯು ಯುವತಿಗೆ ಕಿರುಕುಳ ನೀಡಿದರೂ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು. ಇದರಿಂದ ಬೇಸತ್ತ ಯುವತಿ ಆರೋಪಿ ಹುಸೇನನ ಫೋಟೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿ ಆತನ ಕೃತ್ಯದ ಬಗ್ಗೆ ವಿವರಿಸಿದ್ದರು.
ಕೆಲವೇ ಗಂಟೆಯಲ್ಲಿ ಯುವತಿಯ ಪೋಸ್ಟ್ ವೈರಲ್ ಆಗಿತ್ತು. ಫೋಸ್ಟ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ಕಮೀಷನರ್ ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ಮಹೇಶ್ ಬಸ್ ಡ್ರೈವರ್ ಮತ್ತು ನಿರ್ವಾಹಕನಿಗೆ ಸಮನ್ಸ್ ನೀಡಿರುವ ಪೊಲಿಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕಪಾಳ ಮೋಕ್ಷ
ಆರೋಪಿಯ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಮಿಷನರ್ ಇಂದು ಪತ್ರಿಕಾಗೋಷ್ಟಿ ಕರೆದಿದ್ದರು. ಈ ವೇಳೆ ಆರೋಪಿಯನ್ನೂ ಮಾಧ್ಯಮದವರ ಮುಂದೆ ಕರೆತಂದರು. ಅಲ್ಲಿಯೇ ಇದ್ದ ಯುವತಿ ಆರೋಪಿಯನ್ನು ಕಂಡೊಡನೆ ಪೊಲೀಸರ ಎದುರೇ ಆತನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆಯಿತು. ಇದೇ ವೇಳೆ ‘Moms Mangalore’ ಸಂಘಟನೆಯ ದಿವ್ಯಾ ಕೂಡ ಕಪಾಳ ಮೋಕ್ಷ ಮಾಡಿದರು.

















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್