ಮುಂಬೈ: ಟೆಲಿವಿಷನ್ ರೇಟಿಂಗ್ಸ್ ಪಾಯಿಂಟ್ (ಟಿಆರ್‌ಪಿ) ಹಗರಣದ ಆರೋಪ ಹೊತ್ತಿರುವ ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಹಾಗೂ ರಿಪಬ್ಲಿಕ್ ಚಾನಲ್ ನ ಸ್ಥಾಪಕ ಅರ್ನಬ್ ಗೋಸ್ವಾಮಿ ಅವರ ನಡುವಿನ ವಾಟ್ಸ್ ಆಪ್ ಚಾಟ್ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಎನ್ ಸಿಪಿ ಆಗ್ರಹಿಸಿದೆ.
ಬಾಲಾಕೋಟ್ ವೈಮಾನಿಕ ದಾಳಿಗೂ ಮುನ್ನ ಇದಕ್ಕೆ ಹೋಲಿಕೆಯಾಗುವ ವಿಷಯವನ್ನು ವಾಟ್ಸ್ ಆಪ್ ಮೂಲಕ ಇಬ್ಬರೂ ಚರ್ಚಿಸಿದ್ದರು. ರಾಷ್ಟ್ರೀಯ ಭದ್ರತೆಯ ವಿಷಯಗಳನ್ನು ಟಿಆರ್ ಪಿಗಳಿಗಾಗಿ ಬಳಸಿಕೊಳ್ಳುವುದು ಅತ್ಯಂತ ಅಘಾತಕಾರಿ ಎಂದು ಎನ್ ಸಿಪಿ ವಕ್ತಾರ ಮಹೇಶ್ ತಪಾಸೆ ಹೇಳಿದ್ದಾರೆ.
ಚಾಟ್ ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಸ್ಪಷ್ಟನೆ ಕೋರುವಂತೆ ಆಗ್ರಹಿಸಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಭೇಟಿ ಮಾಡುವುದಾಗಿ ಮಹೇಶ್ ತಪಾಸೆ ತಿಳಿಸಿದ್ದಾರೆ.
ಅರ್ನಬ್ ಗೋಸ್ವಾಮಿ ಅವರಿಗೆ ಈ ರೀತಿಯ ಸೂಕ್ಷ್ಮ ಮಾಹಿತಿ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಗೃಹ ಸಚಿವಾಲಯ ಈ ಮಾಹಿತಿ ಸೋರಿಕೆಯಾಗಿರುವ ಮೂಲವನ್ನು ಪತ್ತೆ ಹಚ್ಚಿ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಮಹೇಶ್ ತಾಪಸೆ ಆಗ್ರಹಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಕಾರನ್ನು ಕದ್ದು ಮಾರಿದ ಪೋಲೀಸರು: ಮಂಗಳೂರು ಸಿಸಿಬಿ ಪೋಲಿಸರ ವಿರುದ್ಧ ಸಿಐಡಿ ತನಿಖೆ
ಚೆಕ್ಇನ್ ಬ್ಯಾಗೇಜ್ ಇಲ್ಲದ ವಿಮಾನ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ
ಕೋವಿಡ್ ನಿರ್ಬಂಧಗಳು ರಂಜಾನ್ ವರೆಗೆ ವಿಸ್ತರಣೆ
ಸೌದಿ: ವಲಸಿಗರಿಗೆ ಶಾಕ್ – ರೆಸ್ಟೋರೆಂಟ್, ಸೂಪರ್ಮಾರ್ಕೆಟ್ಗಳಲ್ಲೂ ದೇಶೀಕರಣ
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್
ಕೋವಿಡ್ ಟೆಸ್ಟ್ ಹೆಸರಲ್ಲಿ ವಲಸಿಗರಿಂದ ಲೂಟಿ- ಹೊಸ ಕಾನೂನು ವಿರುದ್ಧ ವ್ಯಾಪಕ ಆಕ್ರೋಶ