ಮೂಡಡ್ಕ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಜುಬೈಲ್ ಸಮಿತಿಯ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ನಮ್ಮನ್ನಗಲಿದ ಸ್ಥಾಪನೆ, ಸಂಘಟನೆಗಳ ಹಾಗೂ ಕುಟುಂಬದಿಂದ ಮರಣಹೊಂದಿದ ಸದಸ್ಯರ ಮೇಲೆ ತಹ್ಲೀಲ್ ಸಮರ್ಪಣೆ ಹಾಗೂ ದುಆ ಮಜ್ಲಿಸ್ ಕಾರ್ಯಕ್ರಮವು ಸಯ್ಯಿದ್ ಅಹ್ಮದ್ ತಂಙಳ್ ಉಪ್ಪಿನಂಗಡಿ ರವರ ನೆತೃತ್ವದಲ್ಲಿ ನಡೆಯಿತು.
ಮೂಡಡ್ಕ ಜುಬೈಲ್ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಗೌರವಾಧ್ಯಕ್ಷ ಸಯ್ಯಿದ್ ಅಹ್ಮದ್ ತಂಙಳ್ ಉಪ್ಪಿನಂಗಡಿ ರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಮೂಡಡ್ಕ ಸೌದಿ ನ್ಯಾಶನಲ್ ಸಮಿತಿಯ ಸದಸ್ಯರು ಅಬ್ದುಲ್ ಹಕೀಮ್ ಮೆದರಬೆಟ್ಟು, ಮುನೀರ್ ಬಜಾರ್ ಉಪಸ್ಥಿತರಿದ್ದರು. ಇಸ್ಮಾಯಿಲ್ ಮಡಿಕೇರಿ ಬೈಟ್ಟು ಕಿರಾಅತ್ ಪಠಿಸಿದರು. ಅಬ್ದುಲ್ ಕರೀಂ ಲತ್ವೀಫಿ ಸೋಕಿಲರವರು ಸಭೆಯನ್ನು ಉದ್ಘಾಟಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದ ಗತವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿಲಾಯಿತು.ಸಮಿತಿ ಕೋಶಾಧಿಕಾರಿ ಅಬ್ದುಲ್ ಹಕೀಮ್ ಮೆದರಬೆಟ್ಟು ಹಿತವಚನ ನೀಡಿದರು. ಸಭಾಧ್ಯಕ್ಷರು ತಮ್ಮ ಅದ್ಯಕ್ಷ ಭಾಷಣದಲ್ಲಿ ಸಂಘಟನೆಯ ಬಗ್ಗೆ ಹಾಗೂ ಕಾರ್ಯಚರಣೆಯ ಬಗ್ಗೆ ವಿವರಿಸಿದರು. ಮೂಡಡ್ಕ ಜುಬೈಲ್ ಸಮಿತಿ ಸದಸ್ಯರಾದ ಬಹು ಸಯ್ಯಿದ್ ಅಹ್ಮದ್ ತಂಙಳ್ ಉಪ್ಪಿನಂಗಡಿ ನೂತನ ಕಾರ್ಯಕಾರಿ ಸಮಿತಿಗೆ ಪ್ಯಾನಲ್ ಮಂಡಿಸಿ ಅದಕ್ಕೆ ಕೆಲವೊಂದು ಸದಸ್ಯರನ್ನು ಸೇರಿಸಿ 2021-2022ರ ಸಾಲಿಗೆ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಿದರು.
ಗೌರವ ಅಧ್ಯಕ್ಷರಾಗಿ ಸಯ್ಯಿದ್ ಅಹ್ಮದ್ ತಂಙಳ್ ಉಪ್ಪಿನಂಗಡಿ, ಸಲಹೆ ಸಮಿತಿ MKM ಅಬೂಬಕ್ಕರ್ ಮದನಿ ಹೊಸಂಗಡಿ, ಅಝೀಝ್ ಸಅದಿ ಕುಡ್ತಮುಗೇರ್, ಮುನೀರ್ ಬಜಾರ್. ಅಧ್ಯಕ್ಷರಾಗಿ ಅಬ್ದುಲ್ ಹಕೀಮ್ ಮೆದರಬೆಟ್ಟು, ಪ್ರದಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮಡಿಕೇರಿ ಬೈಟ್ಟು, ಕೋಶಾಧಿಕಾರಿಯಾಗಿ ನೌಮಾನ್ ಕಡವಿನಬಾಗಿಲು.ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹ್ಮಾನ್ ಕೆಮ್ಮಾರ, ಮುಹಮ್ಮದ್ ರಫೀಕ್ ಅನಿಯಾ. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಶೀದ್ ಜೋಗಿಬೆಟ್ಟು, ನಿಯಾಝ್ ತುರ್ಕಳಿಕೆ. ಸಂಚಾಲಕರಾಗಿ ಹೈಝಾಮ್ ಪೆರ್ನೆ, ಮುಹಮ್ಮದ್ ಕುಂಞಿ ಉಳ್ಳಾಲ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮೂಸ ಹಾಜಿ ಪುಂಡಲ್, ಮುಸ್ತಫ ಮೈನ ಉಪ್ಪಿನಂಗಡಿ, ಮುಕ್ತಾರ್ ಮೈನ ಉಪ್ಪಿನಂಗಡಿ, ಅಶ್ರಫ್ ನಾಳ ಇಶಾಕ್ ಕಾಯರ್ತಡ್ಕ, ಅಬ್ದುಲ್ ರಹ್ಮಾನ್ ತುರ್ಕಳಿಕೆ, ಬಶೀರ್ ಬಜಾರ್, ಸಪ್ವಾನ್ ಮುಕ್ಕ, ಹಿದಾಯತ್ ಅಳಕೆ, ಅನ್ವರ್ ಕನ್ನಂಗಾರ್. ಸದಸ್ಯರಾಗಿ ಯುಸೂಫ್ KC ರೋಡ್, ಮಹಮ್ಮದ್ ಹಾಜಿ ಮಂಜಲ್ಪಳಿಕೆ, ಶಮೀರ್ ಬಜ್ಪೆ ಸುಲ್ತಾನ್ ಅಂಡೆಲ್, ಖಲೀಲ್ ಮುಡಿಪು, ಹಾರಿಸ್ ಮದ್ದಡ್ಕ, ಇಶ್ಹಾಕ್ ಗುಂಡುಕಲ್ಲು, ಇಸ್ಮಾಯಿಲ್ ಪೆರಿಂಜೆ, ಮುನೀರ್ ಸಾಲೆತ್ತೂರು, ಸಮದ್ ವಳವುರು, ನೌಫಲ್ ಬಜಾಲ್, ಸಮದ್ ದೇರಳಕಟ್ಟೆ, ರಫೀಕ್ ಸೂರಿಂಜೆ, ನಿಸಾರ್ ಗೂಡಿನಬಳಿ, ನವಾಝ್ ಉಳ್ಳಾಲ, ಜಮಾಲುದ್ದೀನ್ ಬಜ್ಪೆ, ಅನ್ಸಾರ್ ತುರ್ಕಳಿಕೆ, ಶರಪುದ್ದೀನ್ ತುರ್ಕಳಿಕೆ, ನೌರೀಶ್ ತುರ್ಕಳಿಕೆ ಎಂಬವರನ್ನು ಆಯ್ಕೆ ಮಾಡಲಾಯಿತು.
ಮುನೀರ್ ಬಜಾರ್ ರವರು ಸ್ವಾಗತಿಸಿ, ನೂತನ ಕಾರ್ಯದರ್ಶಿ ಇಸ್ಮಾಯಿಲ್ ಮಡಿಕೇರಿ ಬೈಟ್ಟು ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ