janadhvani

Kannada Online News Paper

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಾ, ನಾಡಿನ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಮಿಡಿಯುವ ವಿಟ್ಲಾದ ಟಿಪ್ಪು ನಗರ “ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (HTFC)” ಹಾಗೂ “ಬ್ರದರ್ಸ್ ಟಿಪ್ಪು ನಗರ” ಇದರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ವಿಟ್ಲ ಪಡ್ನೂರು ಗ್ರಾಮದ 7 ನೇ ವಾರ್ಡ್ ನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ ಶ್ರೀ ಸಂದೇಶ್ ಶೆಟ್ಟಿ ಬಿಕ್ನಾಜೆ ಯವರನ್ನು ಆಝಾದ್ ಕ್ರೀಡಾಂಗಣ ಟಿಪ್ಪು ನಗರದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಶೋಭಾ ರೈ, ಮೋಹನ ಗೌಡ, ಹರೀಶ್ ಗೌಡ, ಅಝರ್ ಕೊಡಂಗಾಯಿ, ಅಬ್ದುಲ್ ರಹಿಮಾನ್ ಕಡಂಬು, ಸುಲೈಮಾನ್ ಕೆ.ಎಸ್, ಆದಂ ಕುಂಞಿ, ಮುಹಮ್ಮದ್, ಅಬೂಬಕರ್ ಕೊಡಂಗಾಯಿ, ಶಾಹುಲ್ ಹಮೀದ್ ಕುಕ್ಕಿಲ, ಅಶ್ರಫ್ ಕೆ.ಪಿ ಮುಂತಾದ ಗಣ್ಯರು ಭಾಗವಹಿಸಿದ್ದರು.

ಸತ್ತಾರ್ ಬೆಂಗಳೂರು ರವರು ನಿರೂಪಣೆ ಮಾಡಿದ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಸಮೀರ್ ಕೆ.ಎಸ್,ಪ್ರ. ಕಾರ್ಯದರ್ಶಿ ಸಮೀರ್ ಎಂ.ಜಿ, ಕೋಶಾಧಿಕಾರಿ ತಾಜುದ್ದೀನ್, ಕಾರ್ಯದರ್ಶಿ ಹಾರಿಸ್ ಪಿ. ಹಾಗೂ HTFC ಸಂಘದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಶಮೀರ್ ಮಲಬಾರ್ ಗೋಲ್ಡ್

error: Content is protected !! Not allowed copy content from janadhvani.com