ಗೋ ಹತ್ಯೆ ನಿಷೇಧ ಸುಗ್ರೀವಾಜ್ಞೆ, ಗೋ ಮಾಂಸ ರಫ್ತಾಗುವುದನ್ನು ತಡೆಯುತ್ತದೆಯೇ?
ಇದು ಸಾವಿರದಲ್ಲಿ ಒಂದು ಪ್ರಶ್ನೆಯಲ್ಲವೇ? ಗೋ ಮಾತೆ ಪೂಜ್ಯನೀಯವೆಂದು ಹಿಂದೂ ಧರ್ಮೀಯರ ವಿಶ್ವಾಸ. ಅವರವರ ಧರ್ಮ ಅವರವರಿಗೆ ಶ್ರೇಷ್ಠ ಎಂಬ ತತ್ವದಡಿಯಲ್ಲಿ ಅವರ ವಿಶ್ವಾಸವನ್ನು ಗೌರವಿಸೋಣ. ಮುಸ್ಲಿಮರ ಪಾಲಿಗೆ ಗೋ ಮಾಂಸ ಭಕ್ಷಣೆ ಅನುವದನೀಯ ಮಾತ್ರ. ಎಲ್ಲೂ ಕಡ್ಡಾಯ ಮಾಡಿಲ್ಲ. ಅವರಿಗೆ ಬೇಕಿದ್ದರೆ ತಿನ್ನಲು ಇನ್ನೂ ನಿಷೇಧವಾಗದ ಒಂಟೆ, ಆಡು, ಕುರಿ, ಕೋಳಿ ಇತ್ಯಾದಿಗಳಿವೆ. ಅವುಗಳನ್ನು ತಿಂದು ಬದುಕಿಯಾರು.
ಆದರೆ, ಗೋ ಮಾತೆಯ ಹತ್ಯೆ ನಿಷೇಧದಿಂದ, ಮುಸ್ಲಿಮರ ಭಕ್ಷ್ಯವನ್ನು ತಡೆಯುವ ಹುನ್ನಾರ ಮಾತ್ರ ಇಲ್ಲಿ ಎದ್ದು ಕಾಣುತ್ತಿದೆ. ಇಲ್ಲವಾದರೆ, ಗಲ್ಪ್ ರಾಷ್ಟ್ರಗಳೂ ಸೇರಿದಂತೆ ಹಲವಾರು ವಿದೇಶಗಳಿಗೆ ಗೋ ಮಾಂಸವನ್ನು ರಪ್ತು ಮಾಡುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಕೆಲಸ ಮಾಡುತ್ತಿರುವುದು ಸರಕಾರವೇ ಆಗಿದೆ. ಈ ರಪ್ತು ಕಂಪನಿಗಳ ಮಾಲಿಕತ್ವ ಕೂಡಾ ಬ್ರಾಹ್ಮಣರಾದಿ ಹಿಂದೂಗಳದ್ದೇ ಆಗಿದೆ.
ಇನ್ನು, ಗೋ ಹತ್ಯೆ ನಿಷೇಧ ಮಾಡಬೇಕು? ಸುಗ್ರೀವಾಜ್ಞೆ ಮೂಲಕವಾದರೂ ಪೂಜ್ಯನೀಯ ಗೋ ಹತ್ಯೆ ತಡೆಯಬೇಕೆಂದು ಹಠ ಹಿಡಿದವರು. ಉತ್ತರ ಪ್ರದೇಶ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಗೋವಧೆ ಕಾರ್ಖನೆಗಳನ್ನು ಮುಚ್ಚಿ ಹಾಕುವ ಧೈರ್ಯ ತೋರಿದರೆ, ನೀವು ಗೋ ಮಾತೆಗೆ ನಿಜವಾದ ಗೌರವ ತೋರಿದ್ದೀರಿ ಎಂದಾಗುತ್ತದೆ.
ಮತ್ತೆ ಮುದಿ ಹಸುಗಳನ್ನು ವಧಿಸಬಹುದೆನ್ನುವ ಸಡಿಲಿಕೆ ಹಿಂದಿರುವ ಬಲು ದೊಡ್ಡ ಹುನ್ನಾರ ಏನೆಂದರೆ, ಬಿಜೆಪಿ ಮತ್ತು ಆರೆಸ್ಸಸಿಗೆ ಫಂಡ್ ನೀಡುವ ಗೋ ವಧೆ ಕಾರ್ಖನೆಗಳಿಗೆ ಒಳ್ಳೆಯ ದನಗಳನ್ನು ಸಿಗುತ್ತಿಲ್ಲ, ಅದೆಲ್ಲ ಊರಲ್ಲೇ ಕಸಾಯಿಯಾಗಿ ಬಿಕರಿಯಾಗುತ್ತಿದೆ. ಕಾರ್ಖಾನೆಗೆ ಅಗತ್ಯವಿರುವ ಗೋವುಗಳು ಗೋಶಾಲೆಗೆ ಸೇರಲ್ಪಡುವ ಮುದಿ ಗೋವುಗಳೇ ಕಾಣೆಯಾಗುವ ಮೂಲಕ ಆಗುತ್ತಿತ್ತು. ಇದರಿಂದ ಗೋ ಮಾಂಸ ರಫ್ತು ಕಾರ್ಖಾನೆಯ ಗಳಿಕೆ ಇಳಿಮುಖವಾಗಿ ಜಿಡಿಪಿ ಕಡಿಮೆಯಾಗಿದೆ ತಾನೇ?
ಹಿಂದೂಗಳು ಹಿಂದೂ ಧರ್ಮವನ್ನು ಶ್ರದ್ಧೆಯಿಂದ ಆಚರಿಸಿದರೆ, ಮುಸ್ಲಿಮರು ಇಸ್ಲಾಂ ಧರ್ಮವನ್ನು ಶ್ರದ್ಧೆಯಿಂದ ಅನುಸರಿಸಿ ಜೀವಿಸಿದರೆ ಈ ಜಾತ್ಯತೀತ ಭಾರತದಲ್ಲಿ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. ನಮ್ಮ ಪೂರ್ವಿಕರು ಅದನ್ನು ಬದುಕಿ ತೋರಿಸಿದ್ದಾರೆ.
ಅಂದಿನ ದಿನಗಳಲ್ಲಿ ಹಿಂದೂಗಳ ಮನೆಯಲ್ಲಿ ಕೆಲಸಕ್ಕೆ ಹೋಗುವ ಮುಸ್ಲಿಮರು ಮಾಂಸ ಸೇವನೆ ಮಾಡಿ ಹೋಗುತ್ತಿರಲಿಲ್ಲ. ಅವರ ಧರ್ಮವನ್ನು ಗೌರವಿಸಿ, ಗೋ ಮಾಂಸ ಸೇವನೆ ಮಾಡದೆಯೇ ಬದುಕು ಮುಗಿಸಿದ ಎಷ್ಟೋ ಮುಸ್ಲಿಮ್ ಹಿರಿಯರನ್ನು ನಮಗೆ ಪಟ್ಟಿ ಮಾಡಬಹುದು. ಅದು ಅನ್ಯೋನ್ಯತೆಯ ಬದುಕಿಗಾಗಿಯಾಗಿತ್ತು.
ಇದು ಕೊರೋನಾ ಆಡಳಿತಾವಧಿ, ಎನ್ನಾರ್ಸಿ, ಎನ್‌ಪಿಆರ್‌ಗಳಾದಿ ಜನ ವಿರೋಧಿ ಕಾಯ್ದೆಗಳು ಭಾರತವನ್ನು ವಿಭಜನೆ ಮಾಡ ಹೊರಟಾಗ, ಗಂಟಲಲ್ಲಿ ಹಿಡಿದು ಸರ್ಕಾರಗಳನ್ನು ಬೆಂಡೆತ್ತಿದ ಕೊರೋನಾ, ವರ್ಷ ಕಳೆದರೂ ಹೊಸ ರೂಪ ತಾಳಿ ಮತ್ತೆ ಕಾಣಿಸತೊಡಗಿ, ಮೋದಿಯಾದಿ ಶಾರಿಗೆ ನಿದ್ದೆಗೆಡಿಸಿದೆ ಅಂದರೆ ತಪ್ಪಲ್ಲ. ರಾಷ್ಟ್ರ ವಿರೋಧಿಗಳ 2024ರ ಕನಸಿನ ಗೋಪುರವನ್ನು ನುಚ್ಚು ನೂರಾಗಿಸಿ ಭಾರತೀಯರ ಪಾಲಿಗೆ ಕೊರೋನಾ ನೆಮ್ಮದಿಯನ್ನು ತಂದಿದೆ. ಯಾವ ಸುಗ್ರಿವಾಜ್ಞೆಗೂ ಕೊರೋನಾ ಬಗ್ಗುತ್ತಿಲ್ಲ. ಹಳೆ ಪ್ರಭೇಧಕ್ಕೆ ಕಂಡುಹಿಡಿದ ಲಸಿಕೆಯನ್ನು ನೋಡಿ ಗಹಗಹಿಸಿ ನಗುತ್ತಿದೆ ಮತ್ತೊಂದು ನ್ಯೂ ಜೀನ್ ಲಂಡನ್ ಕೊರೋನಾ.
ದೇಶ ಆಳುವವರು ಅಕ್ರಮಿಗಳಾಗಿರುವುದರಿಂದ ಕೊರೋನಾ ಬಂದಿರಬೇಕು. ಅಕ್ರಮ ರಾಜಕಾರಣ ಬಿಟ್ಟು, ಮುಸ್ಲಿಮರು ಸೇರಿದಂತೆ ಎಲ್ಲರಿಗೂ ಸಮಾನ ಬದುಕುವ ಅವಕಾಶ ನೀಡುವ ಮೂಲಕ ನ್ಯಾಯ ನೀತಿಯಿಂದ ರಾಜ್ಯವನ್ನಾಳಿ, ನಿಮಗೆ ಜಗದೊಡೆಯ ಕರುಣೆ ತೋರುವನು ಪರೀಕ್ಷಿಸಿ ನೋಡಿ.