ಯುನೈಟೆಡ್ ಅರಬ್ ಎಮಿರೇಟ್ಸ್ ಇದರ 49ನೇ ರಾಷ್ಟ್ರೀಯ ದಿನವನ್ನು ಸಂಭ್ರಮದಿಂದ ರಾಷ್ಟ್ರದಾದ್ಯಂತ ಆಚರಿಸುತ್ತಿರುವ ಈ ವೇಳೆಯಲ್ಲಿ ರಾಷ್ಟ್ರ ನಾಯಕರಿಗೂ ಅನಿವಾಸಿಗಳಿಗೂ ಮನ ತುಂಬಿದ ಶುಭಾಶಯಗಳು.
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ಒಂದಿಷ್ಟು ಆಶ್ಚರ್ಯ ಹಾಗೂ ಅನುಕರಣೆಯ ಮಾದರಿಯಾದ ರಾಷ್ಟ್ರವಾಗಿದೆ.ಇನ್ನೂರಕ್ಕೂ ಹೆಚ್ಚು ರಾಷ್ಟ್ರದ ಪ್ರಜೆಗಳನ್ನು ತನ್ನ ಮಡಿಲಲ್ಲಿ ಉದ್ಯೋಗ ಇನ್ನಿತರ ಜೀವನ ಮಾರ್ಗದಲ್ಲಿ ತೊಡಗಿಕೊಳ್ಳಲು ಇಲ್ಲಿನ ಸರ್ಕಾರವು ತನ್ನ ಸಂವಿಧಾನವನ್ನು ಜಾತಿ ಮತ ವರ್ಣ ವಿವೇಚನೆಯಿಲ್ಲದೆ ಸ್ವತಂತ್ರ ವಾತಾವರಣವನ್ನು ಅನುವು ಮಾಡಿಕೊಟ್ಟಿದೆ.
ಈಲ್ಲಿ ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬ ಇಸ್ಲಾಮಿನ ಅತಿವಿಶಾಲವಾದ ಅತಿಥಿ ಮನೋಭಾವ ಮತ್ತು ಹೃದಯ ವಿಶಾಲತೆ ಇರುವವರಿಗಿದ್ದಾರೆ ಇಲ್ಲಿನ ರಾಷ್ಟ್ರೀಯ ನಾಯಕರು. ಕಳೆದ ಕೋವಿಡ್ ಎಂಬ ಮಹಾಮಾರಿ ರಾಷ್ಟ್ರಾದ್ಯಂತ ವ್ಯಾಪಿಸಿದಾಗ ಲಾಕ್ ಡೌನ್ ಮಾಡಬೇಕಾದ ಸಮಯದಲ್ಲಿ ದುಬೈ ಸರಕಾರವು ನೀಡಿದ ಟೆನ್ ಮಿಲಿಯನ್ ಫುಡ್ ವಿತರಣೆಯು ಇದರ ಉತ್ತಮ ಉದಾಹರಣೆಯಾಗಿದೆ.
ವಲಸಿಗರು, ಪ್ರಜೆಗಳೆಂಬ ವಿಭಜನೆಯನ್ನು ತೋರದೆ ಸರ್ವರಿಗೂ ಸಮ ಬದುಕಿನ ಸ್ಥಿತಿಯನ್ನು ಸೃಷ್ಟಿಮಾಡಿ ಮುಂದಕ್ಕೆ ಸಾಗುವ ಈ ರಾಷ್ಟ್ರಕ್ಕೆ ಒಳಿತನ್ನು ಬಯಸದೆ ಯಾರು ಇಲ್ಲಿ ವಾಸಿಸಲು ಸಾಧ್ಯವೇ ಇಲ್ಲ.ಇದೇ ಉದ್ದೇಶದಿಂದ ಕಾರ್ಯಾಚರಿಸಿ, ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಶೈಕ್ಷಣಿಕ ಕ್ರಾಂತಿಯೊಂದಿಗೆ ಅನಿವಾಸಿ ಕನ್ನಡಿಗರ ಭರವಸೆಯ ಬೆಳಕಾಗಿ ಬೆಳೆದು ಬಂದ ಕ್ರಾಂತಿಕಾರಿ ಒಕ್ಕೂಟವಾಗಿದೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ ಸಿ ಎಫ್).

ಯುನೈಟೆಡ್ ಅರಬ್ ಎಮಿರೇಟ್ಸ್ ಇದರ 49ನೇ ರಾಷ್ಟ್ರೀಯ ದಿನ ಪ್ರಯುಕ್ತ ಕೆಸಿಎಫ್ ಯುಎಇ ಸಮಿತಿಯು ಸಂಭ್ರಮಾಚರಣೆ ಹಮ್ಮಿಕೊಂಡಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಮಾಜಿ ಸಭಾಪತಿ ಕೆಆರ್ ರಮೇಶ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಶಾಫೀ ಸಅದಿ ಹಾಗೂ ಇನ್ನಿತರ ರಾಜಕೀಯ ಹಾಗೂ ಸಾಮಾಜಿಕ ನಾಯಕರು, ಕೆ ಸಿ ಎಫ್ ವಿವಿಧ ರಾಷ್ಟ್ರದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ದಿನವಾದ ಡಿಸೆಂಬರ್ 2ರಂದು ದುಬೈ ಸಮಯ ಒಂದು ಗಂಟೆಗೆ ಸರಿಯಾಗಿ ಝೂಮ್ (ZOOM) ಆನ್ಲೈನ್ ಮುಖಾಂತರ ಕಾರ್ಯಕ್ರಮ ನಡೆಯಲಿದೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ