ಗಂಗಾವತಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ನಾಯಕರ ಜಿಲ್ಲಾ ಭೇಟಿ ಇಂದು ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ತಲುಪಿತು.
ಗಂಗಾವತಿಯ ಮುಹಮ್ಮದೀಯ ಶಾದೀ ಮಹಲ್‌ನಲ್ಲಿ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಅಶ್ರಫ್ ರಝಾ ಅಮ್ಜದಿ ಉಡುಪಿ ಉದ್ಘಾಟಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಡೆಪ್ಯುಟಿ ಅಧ್ಯಕ್ಷ ಮೌಲಾನಾ ಗುಲಾಂ ಹುಸೈನ್ ನೂರಿ, ಕಾರ್ಯದರ್ಶಿ ಮುಸ್ತಫಾ ನಈಮಿ ಹಾವೇರಿ ಹಾಗೂ ಎಕೆ ರಝಾ ಅಮ್ಜದಿ ಮಾತನಾಡಿದರು.
ಸದಸ್ಯತ್ವ ಅಭಿಯಾನ, ಯುನಿಟ್ ಹಾಗೂ ಡಿವಿಷನ್ ರಚನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಸಫ್ವಾನ್ ಚಿಕ್ಕಮಗಳೂರು, ಮುನೀರ್ ಮದನಿ ಮೈಸೂರು, ರಫೀಕ್ ಮಾಸ್ಟರ್, ಮುಬಶ್ಶಿರ್ ಅಹ್ಸನಿ, ಶರೀಫ್ ಕೊಡಗು, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮೌಲಾನಾ ನಝೀರ್ ಅಹ್ಮದ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮೆಹಬೂಬ್ ಬಸಾಪಟ್ಟಣ, ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸಲೀಂ, ಜಿಲ್ಲಾ ಉಪಾಧ್ಯಕ್ಷ ಖಾಜಾ ರಝಾ ಬರಕಾತಿ, ಖಾಜಾ ಮೌಲಾನಾ ಸಂಗಾಪುರ, ಮೌಲಾನಾ ಝಾಹಿದ್ ತಾವರಗೇರಾ, ಕಾರ್ಯದರ್ಶಿ ಸಲೀಂ ಅಳವಂಡಿ ಉಪಸ್ಥಿತರಿದ್ದರು.
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಷನ್: ವಾರ್ಷಿಕ ಮಹಾಸಭೆ- ನೂತನ ಸಮಿತಿ ಅಸ್ತಿತ್ವಕ್ಕೆ
ಅಲ್-ಮದೀನತುಲ್ ಮುನವ್ವರ ಮೂಡಡ್ಕ: ಅಲ್ ಬಾದಿಯಾ ಮಹಾಸಭೆ
ಅಲ್-ಮದೀನತುಲ್ ಮುನವ್ವರ: ಮುಬಾರಕಿಯ್ಯಾ ಮಹಾಸಭೆ
ವಿದ್ಯಾರ್ಥಿ ವೇತನ ಸಮಸ್ಯೆ : ಬ್ಯಾರಿ ಮಹಾಸಭಾ ವೇದಿಕೆಯಿಂದ ಅಲ್ಪಸಂಖ್ಯಾತ ಅಧ್ಯಕ್ಷರ ಭೇಟಿ
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಇಹ್ಸಾನ್ ಸೆಂಟರ್, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಜನವರಿ 17ಕ್ಕೆ