janadhvani

Kannada Online News Paper

ಮೌಲಿದ್ ಮಾಸಾಚರಣೆ ಸಮಾರೋಪ ಮತ್ತು ತಾಜುಲ್ ಉಲಮಾ ಅನುಸ್ಮರಣೆ

ಉಳ್ಳಾಲ: “ಇಲಲ್ ಹಬೀಬ್” ಘೋಷ ವಾಕ್ಯದೊಂದಿಗೆ ರಬೀವುಲ್ ಅವ್ವಲ್ ತಿಂಗಳಲ್ಲಿ ಆಹ್ವಾನಿತರ ಮನೆಗೆ ತೆರಳಿ ನಡೆದ ಮೌಲಿದ್ ಮಜ್ಲಿಸ್ ನ 14 ನೇ ವಾರ್ಷಿಕ ಸಮಾರೋಪ ಸಮಾರಂಭ, ಬೃಹತ್ ಮೌಲಿದ್ ಮಜ್ಲಿಸ್ ಮತ್ತು ತಾಜುಲ್ ಉಲಮಾ (ಖ. ಸಿ) ರವರ ಅನುಸ್ಮರಣಾ ಕಾರ್ಯಕ್ರಮವು ನವೆಂಬರ್ 16, 2020 ಸೋಮವಾರ ರಾತ್ರಿ ಯು.ಡಿ ಫಾರೂಕ್ ಅವರ ಮನೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಅಳೇಕಲ ಜುಮಾ ಮಸೀದಿಯ ಅಧ್ಯಕ್ಷರಾದ ಶಿಹಾಬ್ ಸಖಾಫಿ ಉಸ್ತಾದರು ದುವಾ ಮೂಲಕ ಚಾಲನೆ ನೀಡಿದರು. ಮೌಲಿದ್ ಮಜ್ಲಿಸ್ ನೇತ್ರತ್ವವನ್ನು ಹನೀಫ್ ಸಅದಿ ಅಲ್ ಅಫ್ಲಲಿ ಉಸ್ತಾದರು ವಹಿಸಿದ್ದರು.
ನಂತರ ನಡೆದ ತಾಜುಲ್ ಉಲಮಾ (ಖ.ಸಿ) ಅನುಸ್ಮರಣಾ ಕಾರ್ಯಕ್ರಮದಲ್ಲಿ ಶರೀಫ್ ಸಅದಿ ಸುಂದರಿಬಾಗ್ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು.

ದರ್ಗಾ ಮಾಜಿ ಅಧ್ಯಕ್ಷರಾದ ಯು ಎಸ್ ಹಂಝ ಹಾಜಿ, ಕೌನ್ಸಿಲರ್ ಯು ಎ ಇಸ್ಮಾಯಿಲ್, ಸಯ್ಯಿದ್ ಝಿಯಾದ್ ತಂಙಳ್, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅಳೇಕಲ ಜುಮಾ ಮಸೀದಿಯ ಖತೀಬರಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಲ್ ಹಾಜ್ ಅಬೂಝಿಯಾದ್ ಪಟ್ಟಾಂಬಿ ಉಸ್ತಾದರನ್ನು ಸುನ್ನೀ ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ SSF ಅಳೇಕಲ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ SSF ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಲ ಉಸ್ತಾದರು ಚಾಲನೆ ನೀಡಿದರು. ರಬೀವುಲ್ ಅವ್ವಲ್ ತಿಂಗಳಲ್ಲಿ ನಡೆಸಿದ ವಿವಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಳೇಕಲ ಮದ್ರಸ ಮುಅಲ್ಲಿಮರು, ಯು.ಡಿ ಮುಹಮ್ಮದ್ ಹಾಜಿ, ಯು.ಡಿ ಬದ್ರು ಹಾಜಿ, ಯು.ಡಿ ಇಬ್ರಾಹಿಂ, ಯು.ಡಿ ಫಾರೂಕ್, ರಶೀದ್ ಹಾಜಿ ಪಾಂಡೇಶ್ವರ, ಅಳೇಕಲ ಮಸೀದಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಹಾಜಿ, ಉಪಾಧ್ಯಕ್ಷ ಅಶ್ರಫ್ ಯು.ಡಿ,
SSF ಜಿಲ್ಲಾ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್, ಉಳ್ಳಾಲ ಡಿವಿಶನ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್, ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ, ತೊಕ್ಕೊಟ್ಟು ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ, ಅನ್ಸಾರ್ ಅಳೇಕಲ, ಪ್ರಧಾನ ಕಾರ್ಯದರ್ಶಿ ಶಫೀಖ್ ಇಂಜಿನಿಯರ್, ಕೋಶಾಧಿಕಾರಿ ಜುನೈದ್ ಮದನಿ ನಗರ, ಶಾಖಾ ಅಧ್ಯಕ್ಷ ಫಾಝಿಲ್ ಅಳೇಕಲ, ಪ್ರಧಾನ ಕಾರ್ಯದರ್ಶಿ ಜಂಶೀರ್ ಅಳೇಕಲ, ಶಾಖಾ ಉಸ್ತುವಾರಿ ಮಹ್ರೂಫ್ ಹಿದಾಯತ್ ನಗರ, SYS ನಾಯಕರಾದ ರಿಯಾಝ್ ಅಳೇಕಲ, ರಝಾಕ್, ಹಫೀಝ್ ಅಲ್ ಫಾಳಿಲಿ ಉಸ್ತಾದ್, ಅಶ್ರಫ್ ಸುಳ್ಯ, SVS ಅಧ್ಯಕ್ಷ ಅಶ್ರಫ್ ಸಿ.ಎಂ, ಪ್ರಧಾನ ಕಾರ್ಯದರ್ಶಿ ಜವಾದ್, ಕೋಶಾಧಿಕಾರಿ ಬಶೀರಾಕ ಸಹಿತ SYS, SSF, SVS, Rainbow ಪದಾಧಿಕಾರಿಗಳು, ಕಾರ್ಯಕರ್ತರು, ಊರಿನ ಪ್ರಮುಖರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com