ಜಾರ್ಜಿಯಾ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಕೇವಲ 15 ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಾದ ಜೋ ಬಿಡೆನ್ ಮತ್ತು ಡೋನಾಲ್ಡ್ ಟ್ರಂಪ್ ನಡುವೆ ಅಧ್ಯಕ್ಷ ಸ್ಥಾನ್ಕಕೆ ಭಾರೀ ಪೈಪೋಟಿ ನಡೆಯುತ್ತಿದ್ದು ಇಬ್ಬರೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ನಡುವೆ ಚುನಾವಣಾ ರ‍್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಆಡಿರುವ ಮಾತು ಇಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಭಾನುವಾರ ಜಾರ್ಜಿಯಾದ ಮ್ಯಾಕನ್ ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಈ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದರೆ ನೀವು ನನ್ನನ್ನು ಮತ್ತೆ ನೋಡಬಹುದು, ಅಕಸ್ಮಾತ್ ನಾನು ಸೋಲನುಭವಿಸಿದರೆ ಭಾಗಶಃ ಈ ದೇಶವನ್ನೇ ತೊರೆಯಬೇಕಾಗುತ್ತದೆ” ಎಂದು ಹೇಳಿಕೆ ನೀಡಿದ್ದಾರೆ.
ಟ್ರಂಪ್ ಇಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಚುನಾವಣಾ ಪ್ರಚಾರದ ವೇಳೆ ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾಗಿ ಫ್ಲೋರಿಡಾ ಮತ್ತು ಜಾರ್ಜಿಯಾದಲ್ಲಿ ನಡೆದ ರ್‍ಯಾಲಿಗಳಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೋ ಬಿಡನ್ ಅಮೆರಿಕಾದಲ್ಲಿ ಕಮ್ಯುನಿಸಮ್ ಮತ್ತು ಪ್ರವಾಹೋಪಾದಿಯಲ್ಲಿ ಕ್ರಿಮಿನಲ್ ವಲಸಿಗರನ್ನು ತುಂಬಲಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತ, ಬಿಡೆನ್ ತಮ್ಮ ಚುನಾವಣಾ ಪ್ರಚಾರದಲ್ಲಿ, ಡೊನಾಲ್ಡ್ ಟ್ರಂಪ್ ಸರ್ಕಾರ ಕೊರೋನಾ ವೈರಸ್ ನಿಯಂತ್ರಣ ಮಾಡದ ವಿಚಾರವನ್ನು ಅಭಿಯಾನದ ಪ್ರಬಲ ವಿಷಯವನ್ನಾಗಿ ಇಟ್ಟುಕೊಂಡಿದ್ದಾರೆ. ’ಈ ವೈರಸ್ ಪವಾಡದಂತೆ ಕಣ್ಮರೆಯಾಗಲಿದೆ ಎಂದು ಅವರು ನಮಗೆ ಹೇಳುತ್ತಲೇ ಇರುತ್ತಾರೆ ಆದರೆ ವಾಸ್ತವವಾಗಿ ಅದು ಮತ್ತಷ್ಟು ಹೆಚ್ಚುತ್ತಿದೆ’ ಎಂದು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.















ಇನ್ನಷ್ಟು ಸುದ್ದಿಗಳು
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ
ಇರಾನ್ ಜೊತೆಗಿನ ಸಂಧಾನಕ್ಕೆ ಬ್ರೇಕ್? – ಅಮೆರಿಕ ನಿಯೋಗದ ಪ್ರವಾಸ ರದ್ದುಪಡಿಸಿದ ಟ್ರಂಪ್
ಇಸ್ರೇಲ್ ಪ್ರಧಾನಿಗೆ ಕ್ಯಾನ್ಸರ್: ಇರಾನ್ ಭಯದಿಂದ ವಿಷಯ ಮುಚ್ಚಿಟ್ಟಿದ್ದಾಗಿ ಸ್ಪಷ್ಟನೆ
ಇರಾನ್ ಪರ ಗುಂಪುಗಳ ದಾಳಿ ಹಿನ್ನೆಲೆ: ಇರಾಕ್ಗೆ ಸೇರಬೇಕಿದ್ದ 500 ಮಿಲಿಯನ್ ಡಾಲರ್ ನಗದು ಸಾಗಾಟವನ್ನು ತಡೆದ ಅಮೆರಿಕ
ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಮೂರು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ
ನಾಳೆ ಮಾತುಕತೆ: ಒಪ್ಪಂದಕ್ಕೆ ಬಾರದಿದ್ದರೆ ಇರಾನ್ನ ವಿದ್ಯುತ್ ಸ್ಥಾವರ, ಸೇತುವೆಗಳ ಧ್ವಂಸ- ಟ್ರಂಪ್ ಎಚ್ಚರಿಕೆ
ಯುಎಸ್-ಇರಾನ್ ಕದನ ವಿರಾಮ ಅಂತ್ಯಕ್ಕೆ ದಿನಗಣನೆ- ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ
ನೌಕಾ ದಿಗ್ಬಂಧನವನ್ನು ಹಿಂಪಡೆಯದ ಅಮೆರಿಕ- ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದ ಇರಾನ್