janadhvani

Kannada Online News Paper

ಎಸ್ಸೆಸ್ಸೆಫ್ ಕಳಂಜಿಬೈಲ್: ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಬೆಳ್ತಂಗಡಿ ಶಾಸಕರಿಗೆ ಮನವಿ

ಬೆಳ್ತಂಗಡಿ:ತಾಲೂಕಿನ ಬಾರ್ಯ ಗ್ರಾಮ ಪಂಚಾಯತ್ ವ್ಯಾಪ್ತಿ ಗೆ ಒಳಪಟ್ಟ ಮೂರುಗೋಳಿಯಿಂದ ಹೇರಾಜೆ ಗೆ ಹೋಗುವ ರಸ್ತೆಯು ತೀವ್ರ ಹದಗೆಟ್ಟಿದ್ದು ಜನಸಾಮಾನ್ಯರು ಪರದಾಡುವಂತಾಗಿದ್ದು,ಪ್ರಯಾಣಿಕರು ಜೀವ ಕೈಯಲ್ಲಿ ಹಿಡ್ಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು 1000 ಕ್ಕಿಂತ ಹೆಚ್ಚಿನ ಕುಟುಂಬಸ್ಥರಿಗೆ, ಶಾಲಾ ಮಕ್ಕಳಿಗೆ, ಕೂಲಿ ಕಾರ್ಮಿಕರಿಗೆ ದೈನಂದಿನ ಚಟುವಟಿಕೆಗೆ ತೆರಳಲು ಇದೊಂದೇ ರಸ್ತೆ ಆಸರೆಯಾಗಿರುತ್ತದೆ, ಆದ್ದರಿಂದ ಈ ರಸ್ತೆಯನ್ನು ಆದಷ್ಟು ಬೇಗ ಮರು ಡಾಮರೀಕರಣ ಮಾಡಿ ಕೊಡಲು ಇಂದು ಮನವಿ ಸಲ್ಲಿಸಲಾಯಿತು.ಮನವಿ ಗೆ ಮಾನ್ಯ ಶಾಸಕರು ಧನಾತ್ಮಕವಾಗಿ ಸ್ಪಂದಿಸಿದರು.

ಈ ಸಂಧರ್ಭ ದಲ್ಲಿ ಎಸ್ಎಸ್ಎಫ್ ಕಳಂಜಿಬೈಲ್ ಶಾಖೆಯ ಮಾಜಿ ಅಧ್ಯಕ್ಷರಾದ ಝಕರಿಯಾ ಲತೀಫಿ ಪಲಿಕೆ,ಶಾಖಾ ಉಪಾಧ್ಯಕ್ಷರು ಅಬ್ದುಲ್ ಮಸೂದ್,ಕೋಶಾಧಿಕಾರಿ ಇಮ್ರಾನ್ ಪಿ.ಹೆಚ್, ಅಶ್ರಫ್ ಕೆಎಚ್, ಕ್ಯಾಂಪಸ್ ಸೆಕ್ರೆಟರಿ ನೌಶಾದ್, ಫಯಾಜ್ ಕೆವಿ ಹಾಗೂ ಶಾಖಾ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com