ಕುಂಬ್ರ : ಎಸ್ಸೆಸ್ಸಫ್ ಕ್ಯಾಂಪಸ್ ಮೈದಾನಿಮೂಲೆ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಕ್ವಿಝ್ ಸ್ಪರ್ಧೆ ಹಾಗೂ ಎಸ್ಸೆಸ್ಸಲ್ಸಿ , ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂದನಾ ಸಮಾರಂಭ 27.9.2020 ರಂದು ಮೈದಾನಿಮೂಲೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಮೈದಾನಿಮೂಲೆ ಜುಮಾ ಮಸೀದಿ ಖತೀಬರಾದ ಅಬ್ದುಲ್ ರಝಾಕ್ ಖಾಸಿಮಿ ದುವಾದ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಕಾರ್ಯದರ್ಶಿ ಹಾರಿಸ್ ಅಡ್ಕ, ಮೈದಾನಿಮೂಲೆ ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಕೆ.ಎ, ಕುಂಬ್ರ ಸೆಕ್ಟರ್ ಉಪಾಧ್ಯಕ್ಷ ರಂಶೀದ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಕಟ್ಟತ್ತಾರು,ಕ್ಯಾಂಪಸ್ ಕಾರ್ಯದರ್ಶಿ ಇರ್ಶಾದ್ ಗಟ್ಟಮನೆ, ಜೊತೆ ಕಾರ್ಯದರ್ಶಿ ಅರಾಫತ್ ಆಶಿಕ್, ಮೈದಾನಿಮೂಲೆ ಶಾಖೆಯ ಅಧ್ಯಕ್ಷ ಜಮಾಲುದ್ದೀನ್,ಉಪಾಧ್ಯಕ್ಷ ಅಸ್ಕರ್ ನೀರ್ಪಾಡಿ, ಕೆಸಿಎಫ್ ನಾಯಕ ಸಲೀಂ ಸಖಾಫಿ, ಯು.ಕೆ ಇಬ್ರಾಹಿಂ ಉಜ್ರೋಡಿ, ಸಹದ್ ಮೈದಾನಿಮೂಲೆ, ಫಾರೂಕು ಇ.ಎ, ಮೊಯ್ದುಕುಂಞಿ, ಹಸೈನಾರ್ ಬಾಳಯ, ಉಸ್ಮಾನ್ ನೀರ್ಪಾಡಿ ಸಹಿತ ಹಲವರು ಉಪಸ್ಥಿತರಿದ್ದರು.
ಕ್ವಿಝ್ ಫಲಿತಾಂಶ :
ವಿದ್ಯಾರ್ಥಿಗಳಿಗಾಗಿ ನಡೆಸಿದ ಕ್ವಿಝ್ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಮುಖ್ತಾರ್ ಉಜ್ರೋಡಿ, ದ್ವಿತೀಯ ಪ್ರಶಸ್ತಿ ರಿಝ್ವಾನ್ ಅಡ್ಕ , ಸೀನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಅಹ್ಮದ್ ಮುಕ್ಶೀದ್, ದ್ವಿತೀಯ ಪ್ರಶಸ್ತಿ ರುಹೈಬ್ ಮುಳಿಯಡ್ಕ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್ ಉಜ್ರೋಡಿ ಸ್ವಾಗತಿಸಿ, ಸಾಬಿರ್ ಉಜ್ರೋಡಿ ಧನ್ಯವಾದ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ