janadhvani

Kannada Online News Paper

ಮಂಗಳೂರು: ಕರ್ನಾಟಕ ಕಂಡ ಅತ್ಯುತ್ತಮ ಪಂಡಿತ, ಹಿರಿಯ ಧಾರ್ಮಿಕ ವಿದ್ವಾಂಸ, ಜ್ಞಾನ ಜ್ಯೋತಿ, ಅರಿವಿನ ತೇಜಸ್ವು ,ನಾಲ್ಕು ಮದ್ಹಬುಗಳಲ್ಲಿ ಫತ್ವ ನೀಡಲು ಯೋಗ್ಯರಾಗಿದ್ದ ಪಿಕ್ಹ್ ಪಂಡಿತರೂ, ಜಾಮಿಆ ಸಅದಿಯಾ ಅರಬಿಯಾ ಶರೀಅತ್ ಕಾಲೇಜು, ಅಲ್ ಇಹ್ಸಾನ್ ಶರೀಅತ್ ಕಾಲೇಜು ಮೂಳೂರು ಇದರ ಪ್ರಾಂಶುಪಾಲರೂ, ಉಡುಪಿ, ಚಿಕ್ಕಮಂಗಳೂರು,ಹಾಸನ ಜಿಲ್ಲಾ ಸಂಯುಕ್ತ ಖಾಝಿಯೂ ಆಗಿದ್ದ ಬಹು| ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ರ ವಿಯೋಗವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

ಉತ್ತಮ ಭಾಷಣಗಾರ, ಸಂಘಟನೆ ಚತುರರಾದ ಬೇಕಲ ಉಸ್ತಾದರು ಸರ್ವ ಧರ್ಮಿಯವರೊಂದಿಗೆ ಸೌಹಾರ್ದದತೆಯ ಹರಿಕಾರನಂತಿದ್ದರು.
ಸದಾ ನಗು ಮುಖದೊಂದಿಗಿದ್ದ ಉಸ್ತಾದರು ಎಲ್ಲರೊಂದಿಗೂ ಸರಳತೆಯೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು.ಅವರು ಸಾವಿರಾರು ಶಿಷ್ಯರನ್ನು ಹೊಂದಿದ್ದರು.ಉಸ್ತಾದರು ಹಲವಾರು ಜಮಾಅತ್ ಗಳ ಖಾಝಿಯೂ ಆಗಿದ್ದರು.

ಶ್ರೀಯುತರ ವಿಯೋಗವು ಸಹಿಸಲಾರದ ದುಃಖ ವನ್ನು ತಂದಿದೆ ಉಸ್ತಾದರ ಪರಲೋಕ ಜೀವನ ಸುಖದಾಯಕವಾಗಿರಲಿ ಎಂದು ಸಂತಾಪ ಸಂದೇಶ ದಲ್ಲಿ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ದಾರಿಮಿ ತಬೂಕು ತಿಳಿಸಿದ್ದಾರೆ.

error: Content is protected !!
%d bloggers like this: