janadhvani

Kannada Online News Paper

SSF ಚಿಕ್ಕಮಗಳೂರು ಬ್ಲಡ್ ಸೈಬೊ: ಅ.2 ರಂದು ಬೃಹತ್ ರಕ್ತದಾನ ಶಿಬಿರ

SSF ಚಿಕ್ಕಮಗಳೂರು ಬ್ಲಡ್ ಸೈಬೊ ಮತ್ತು ರೋಟರಿ IMA ಬ್ಲಡ್ ಬ್ಯಾಂಕ್ ತೀರ್ಥಹಳ್ಳಿ ಇದರ ಸಹಕಾರದೊಂದಿಗೆ 151ನೇ ಗಾಂಧಿ ಜಯಂತಿ ಪ್ರಯುಕ್ತ 4ನೇ ಬೃಹತ್ ರಕ್ತದಾನ ಶಿಬಿರವು ಅಕ್ಟೋಬರ್ 2ರಂದು SSF ಕೊಪ್ಪ ಡಿವಿಷನ್ ವ್ಯಾಪ್ತಿಯ ಕುದುರೆ ಗುಂಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅಪರಾಹ್ನ 2ರಿಂದ ಸಂಜೆ 5 ರವರೆಗೆ ನಡೆಯಲಿದೆ.

SSF ಚಿಕ್ಕಮಗಳೂರು ಬ್ಲಡ್‌ ಸೈಬೊ‌ ಇದರ ಒಂದನೆಯ‌ ಶಿಬಿರವು‌ ಚಿಕ್ಕಮಗಳೂರಿನಲ್ಲಿ ‌ಎರಡನೆಯ ಶಿಬಿರ ಜಯಪುರದಲ್ಲೂ,
ಮೂರನೇ ಶಿಬಿರ ತರೀಕೆರೆಯಲ್ಲೂ ನಡೆದಿದೆ‌. ಇದೀಗ ನಾಲ್ಕನೇ ಶಿಬಿರವು ಕೊಪ್ಪ ಡಿವಿಷನ್ ವ್ಯಾಪ್ತಿಯ ಕುದುರೆ ಗುಂಡಿಯಲ್ಲಿ ನದೆಯಲಿದೆ.

ಪ್ರಸ್ತುತ ಕಾರ್ಯವನ್ನು ನಾಗರಿಕರು ಯಶಸ್ವಿಯಾಗಿಸಬೇಕಾಗಿ ಕೊಪ್ಪ ಡಿವಿಶನ್’ನ ನಾಯಾಕರು ಹಾಗು ಜಿಲ್ಲಾ ಉಸ್ತುವಾರಿ ಶಾಇನ್‌ ಅಲಿ ಹಾಗು ದಿವಿಶನ್‌‌ ಉಸ್ತುವಾರಿ ಶಮೀಮ್‌‌ ಕುದುರೆಗುಂಡಿ ಪತ್ರಿಕಾ ಪ್ರಕಟಣೆಯಲ್ಲಿ ಕೇಳಿಕೊಂಡಿದ್ದಾರೆ.

error: Content is protected !! Not allowed copy content from janadhvani.com