janadhvani

Kannada Online News Paper

ಸೌದಿ ಅರೇಬಿಯಾದ 90ನೇ ನ್ಯಾಷನಲ್‌ ಡೇ ಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸೌದಿ ಅರೇಬಿಯಾ ಸಮಿತಿ ಸೆಪ್ಟೆಂಬರ್ 23 ರಂದು ಆನ್‌ಲೈನ್ ಮೂಲಕ ಆಚರಿಸಲಾಯಿತು.

ವಿಷೇಶ ರೀತಿಯಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪೋಸ್ಟರ್ ಡಿಸೈನ್, ಭಾಷಣ ಸ್ಪರ್ಧೆ ಹಾಗೂ ಕ್ವಿಝ್ ಕಾರ್ಯಕ್ರಮವೂ ಒಳಗೊಂಡಿತ್ತು.

ಸೌದಿ ಅರೇಬಿಯಾದ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ಉಸ್ತಾದರ ದುಆ ಹಾಗೂ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಉಸ್ತಾದರು ನೆರವೇರಿಸಿದರು.

ಅಂತರಾಷ್ಟ್ರೀಯ ಸಮಿತಿ ಇಹ್’ಸಾನ್ ಇಲಾಖೆಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ರೈಸ್ಕೋ ಹಾಗೂ ಕೆಸಿಎಫ್ ಹಿರಿಯ ನೇತಾರರಾದ ಎನ್ ಎಸ್ ಅಬ್ದುಲ್ಲಾ ಹಾಜಿಯವರು ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಯವರ ದಿಕ್ಸೂಚಿ ಭಾಷಣ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು.

ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆಯವರು ಸ್ವಾಗತ ಹೇಳಿದ ಕಾರ್ಯಕ್ರಮಕ್ಕೆ ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆಯವರು ಧನ್ಯವಾದವನ್ನು ಸಲ್ಲಿಸಿದರು.

ಅಬ್ದುಲ್ ಸಲಾಂ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !!
%d bloggers like this: