ಮಂಗಳೂರು: ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರು, ಉಡುಪಿ,ಚಿಕ್ಕಮಂಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿ ಕೇಂದ್ರ ಮುಶಾವರ ಸದಸ್ಯರು ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ವಫಾತಾದರು.
ಕರ್ನಾಟಕದ ಹೆಮ್ಮೆಯಾಗಿದ್ದ ಶೈಖುನಾ ಧಾರ್ಮಿಕ ಕ್ಷೇತ್ರದ ಅಧಿಕೃತ ಧ್ವನಿಯಾಗಿದ್ದರು. ಉಸ್ತಾದರ ವಫಾತ್ ಅಕ್ಷರಶಃ ಸುನ್ನತ್ ಜಮಾಅತ್’ಗೆ ತುಂಬಲಾರದ ನಷ್ಟವಾಗಿದೆ. ಉಸ್ತಾದರ ಪಾರತ್ರಿಕ ದರಜ ಅಲ್ಲಾಹು ಉನ್ನತಿಗೇರಿಸಲಿ.
ಮದ್ರಸ, ಮಸ್ಜಿದ್’ಗಳಲ್ಲಿ ಕುರ್’ಆನ್ ಪಾರಾಯಣ, ತಹ್ಲೀಲ್ ಹೇಳಿ ಪ್ರತ್ಯೇಕ ದುಆ ಮಜ್ಲಿಸ್ ನಡೆಸುವುದರೊಂದಿಗೆ ಮಯ್ಯಿತ್ ನಮಾಜ್ ನಿರ್ವಹಿಸಬೇಕೆಂದು ಈ ಮೂಲಕ ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ.
ಆತೂರು ಸಅದ್ ಮುಸ್ಲಿಯಾರ್(ಅಧ್ಯಕ್ಷರು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ)