janadhvani

Kannada Online News Paper

ಅಳಿಕೆ ಪುಳಿಂಚಾರ್: ಮನೆ,ರಸ್ತೆ ಮೇಲೆ ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ- ಸಾರ್ವಜನಿಕರಲ್ಲಿ ಆತಂಕ

ವಿಟ್ಲ, ಸೆ.22: ಜಿಲ್ಲೆಯಾದ್ಯಂತ ಒಂದು ವಾರದಿಂದ ಭಾರೀ ಮಳೆ ಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಟ್ಲದ ಅಳಿಕೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾರ್ವಜನಿಕರು ಹೆಚ್ಚು ನಡೆದಾಡುವ ,ಹೆಚ್ಚು ವಾಹನಗಳು ಸಂಚರಿಸುವ ಪುಳಿಂಚಾರ್ ಕೊಟ್ರಸ್ ಕಾಂಕ್ರೀಟ್ ರಸ್ತೆಯಲ್ಲಿರುವ ವಿದ್ಯುತ್ತ್ ಕಂಬವು ಏಕ ಕಾಲಕ್ಕೆ ಮನೆಗೆ ಹಾಗು ರಸ್ತೆಗೆ ವಾಲಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಆಪಾಯದಲ್ಲಿದೆ.

ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಶೀಘ್ರದಲ್ಲೇ ಸೂಕ್ತ ಪರಿಹಾರವನ್ನು ಒದಗಿಸಿಕೊಟ್ಟು, ಮುಂದಕ್ಕೆ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸುವಂತೆ ಅಳಿಕೆ ಪುಳಿಂಚಾರ್ ನ ಸಾರ್ವಜನಿಕರು ಅಳಲು ವ್ಯಕ್ತ ಪಡಿಸಿದ್ದಾರೆ.

error: Content is protected !! Not allowed copy content from janadhvani.com