janadhvani

Kannada Online News Paper

SSF ಶಿರ್ಲಾಲ್ ಯೂನಿಟ್ ವತಿಯಿಂದ ಧ್ವಜ ದಿನದ ಸಂಭ್ರಮಾಚರಣೆ

ರಾಜ್ಯದ ವಿವಿಧೆಡೆ SSF 31ನೇ ಧ್ವಜ ದಿನ ಆಚರಿಸುತ್ತಿರುವಾಗ SSF ಶಿರ್ಲಾಲ್ ಯೂನಿಟ್ ವತಿಯಿಂದ ಧ್ವಜ ದಿನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಶಿರ್ಲಾಲ್ ಜಮಾಅತ್ ಕಾರ್ಯದರ್ಶಿ ಸನ್ಮಾನ್ಯ ಆಸಿಫ್ ರವರು ಧ್ವಜಾರೋಹಣಗೈದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಿರ್ಲಾಲ್ ಜಮಾಅತ್ ಖತೀಬರಾದ ಬಹು ಯಾಸೀರ್ ಅಹ್ಮದ್ ಹುಮೈದಿ ಉಸ್ತಾದ್ ರವರು ದುಆ ನೆರವೇರಿಸಿ ನಮ್ಮನ್ನಗಲಿದ ಸಂಘಟನಾ ನಾಯಕರ ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಹಿರಿಯ ವ್ಯಕ್ತಿಗಳಾದ ಇಸ್ಹಾಕ್,ಅಬೂಬಕರ್ ಸಿದ್ದೀಕ್, SSF ಶಿರ್ಲಾಲ್ ಯೂನಿಟ್ ಕಾರ್ಯಕರ್ತರು ಹಾಗೂ SBS ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

error: Content is protected !! Not allowed copy content from janadhvani.com