ಉಜಿರೆ : ಅರಫಾ ಜಾಮಿಅಃ ಮಸ್ಜಿದ್,ಅತ್ತಾಜೆ ಇದರ ಅಧೀನದಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್(ರಿ.) ಎಸ್ಸೆಸ್ಸೆಫ್ ಉಜಿರೆ, ಅತ್ತಾಜೆ ಹಾಗೂ ಕಕ್ಕೆಜಾಲ್ ಯುನಿಟ್ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನವು ದಿನಾಂಕ 10 ಸೆಪ್ಟೆಂಬರ್ 2020 ನೇ ಗುರುವಾರ ಮದರಸ ವಠಾರ ಅತ್ತಾಜೆಯಲ್ಲಿ ನಡೆಯಿತು. ಅತ್ತಾಜೆ ಮಸ್ಜಿದ್ ಖತೀಬರಾದ ಇಬ್ರಾಹಿಂ ಸಅದಿ ದುಃಅ ನೆರವೇರಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ವೈಎಸ್ ಉಜಿರೆ ಸೆಂಟರ್ ಕೋಶಾಧಿಕಾರಿ ಇಬ್ರಾಹಿಂ ಅತ್ತಾಜೆ ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾದ ಎಸ್.ಎಂ ಕೋಯ ತಂಙಳ್ ಉಜಿರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ವೈಎಸ್ ಉಜಿರೆ ಬ್ರಾಂಚ್ ಪ್ರ.ಕಾರ್ಯದರ್ಶಿ ಹಾರಿಸ್ ಎಟುಝಡ್ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಸದಸ್ಯರಾಗಿದ್ದ ಅಶ್ರಫ್,ಅಲ್- ಅಮೀನ್ ಯಂಗ್ಮೆನ್ಸ್ ಉಜಿರೆ ಪ್ರ.ಕಾರ್ಯದರ್ಶಿ ಅಬ್ದುಲ್ ರಹಮಾನ್ ಕುಂಟಿನಿ, ಸ್ವಲಾತ್ ಕಮಿಟಿ ಅತ್ತಾಜೆ ಪ್ರ.ಕಾರ್ಯದರ್ಶಿ ಇಸುಬು,ಅತ್ತಾಜೆ ಮಸ್ಜಿದ್ ಮುಅಲ್ಲಿಂ ಶಾಹುಲ್ ಹಮೀದ್ ಮದನಿ, ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಎಂ.ಮುಬೀನ್ ಉಜಿರೆ, ಎಸ್ಸೆಸ್ಸೆಫ್ ಅತ್ತಾಜೆ ಯುನಿಟ್ ಅಧ್ಯಕ್ಷರಾದ ಮಜೀದ್ ಅತ್ತಾಜೆ, ಕಕ್ಕೆಜಾಲ್ ಯುನಿಟ್ ಅಧ್ಯಕ್ಷರಾದ ಶರ್ವಾನ್ ಕಕ್ಕೆಜಾಲ್,ಹಾಗೂ ಬಶೀರ್ ಅತ್ತಾಜೆ,ಝುಬೈರ್ ಅತ್ತಾಜೆ, ಅನ್ವರ್ ಅತ್ತಾಜೆ ಮುಂತಾದವರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ನಾಯಕರಾದ ಅಬ್ದುಲ್ ರವೂಫ್ ಅತ್ತಾಜೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
250 ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ