ಪರ್ಕಳ: ಉಡುಪಿಯ ಪರ್ಕಳದಲ್ಲಿ ಅನ್ಯ ಧರ್ಮದ ಓರ್ವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತರಾಗಿದ್ದರು. ಆದರೆ, ಅವರ ಕುಟುಂಬದವರು ಆ ಶವದ ಅಂತ್ಯ ಸಂಸ್ಕಾರ ನಡೆಸಲು ಮುಂದೆ ಬಂದಿರಲಿಲ್ಲ. ಈ ಸಂದರ್ಭ ಸುನ್ನಿ ಹೆಲ್ಪ್ ಡೆಸ್ಕ್ ಕಾರ್ಯಕರ್ತರು ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳ ಅನುಮತಿ ಹಾಗೂ ಆ ಕುಟುಂಬದ ಬೇಡಿಕೆಯಂತೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಇಂದ್ರಾಳಿ ರುದ್ರ ಭೂಮಿ ತನಕ ಆ ಶವ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಕೊನೆಗೆ ಗೌರವಯುತ ಅಂತ್ಯ ಸಂಸ್ಕಾರ ನಡೆಯುವುದರೊಂದಿಗೆ ಮೃತರ ಕುಟುಂಬ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.
ಈ ಸೇವೆಯಲ್ಲಿ ನೇಜಾರು ಅಬೂಬಕ್ಕರ್ ಹಾಜಿ, ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ರಫೀಕ್ ದೊಡ್ಡಣಗುಡ್ಡೆ , ಖಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಅಲ್ತಾಫ್ ಮಲ್ಪೆ,ಅಫ್ಜಲ್ ಕರಂಬಳ್ಳಿ, ಬಶೀರ್ ಕರಂಬಳ್ಳಿ, ನಝೀರ್ ಕರಂಬಳ್ಳಿ ಹಾಗೂ ಆಸಿಫ್ ಮಂಚಿ ಭಾಗಿಯಾದರು.
ಈ ಮಾನವೀಯ ಸೇವಾ ಕೈಂಕರ್ಯಕ್ಕೆ ಅಧಿಕಾರಿ ವರ್ಗ ಹಾಗೂ ಕುಟುಂಬಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಡೆಸ್ಕ್
ಪರ್ಕಳ: ಉಡುಪಿಯ ಪರ್ಕಳದಲ್ಲಿ ಅನ್ಯ ಧರ್ಮದ ಓರ್ವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತರಾಗಿದ್ದರು. ಆದರೆ, ಅವರ ಕುಟುಂಬದವರು ಆ ಶವದ ಅಂತ್ಯ ಸಂಸ್ಕಾರ ನಡೆಸಲು ಮುಂದೆ ಬಂದಿರಲಿಲ್ಲ. ಈ ಸಂದರ್ಭ ಸುನ್ನಿ ಹೆಲ್ಪ್ ಡೆಸ್ಕ್ ಕಾರ್ಯಕರ್ತರು ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳ ಅನುಮತಿ ಹಾಗೂ ಆ ಕುಟುಂಬದ ಬೇಡಿಕೆಯಂತೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಇಂದ್ರಾಳಿ ರುದ್ರ ಭೂಮಿ ತನಕ ಆ ಶವ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಕೊನೆಗೆ ಗೌರವಯುತ ಅಂತ್ಯ ಸಂಸ್ಕಾರ ನಡೆಯುವುದರೊಂದಿಗೆ ಮೃತರ ಕುಟುಂಬ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.
ಈ ಸೇವೆಯಲ್ಲಿ ನೇಜಾರು ಅಬೂಬಕ್ಕರ್ ಹಾಜಿ, ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ರಫೀಕ್ ದೊಡ್ಡಣಗುಡ್ಡೆ , ಖಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಅಲ್ತಾಫ್ ಮಲ್ಪೆ,ಅಫ್ಜಲ್ ಕರಂಬಳ್ಳಿ, ಬಶೀರ್ ಕರಂಬಳ್ಳಿ, ನಝೀರ್ ಕರಂಬಳ್ಳಿ ಹಾಗೂ ಆಸಿಫ್ ಮಂಚಿ ಭಾಗಿಯಾದರು.
ಈ ಮಾನವೀಯ ಸೇವಾ ಕೈಂಕರ್ಯಕ್ಕೆ ಅಧಿಕಾರಿ ವರ್ಗ ಹಾಗೂ ಕುಟುಂಬಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ