janadhvani

Kannada Online News Paper

ಬಿಜೆಪಿ ಮುಖಂಡನಿಂದ ‘ಮೋದಿ ಇಡ್ಲಿ’: 10 ರೂಪಾಯಿಗೆ 4

ಕೊಯಂಬತ್ತೂರ್​:ಬಿಜೆಪಿ ಮುಖಂಡನೋರ್ವ ಸೇಲಂನಲ್ಲಿ ‘ಮೋದಿ ಇಡ್ಲಿ’ ಮಾರಾಟಕ್ಕೆ ಮುಂದಾಗಿದ್ದಾರೆ. ಇಡ್ಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಇಟ್ಟಿರುವ ಅವರು, 10 ರೂಪಾಯಿಗೆ 4 ಇಡ್ಲಿ ನೀಡುವುದಾಗಿ ತಿಳಿಸಿದ್ದಾರೆ.

ಇದು ತಮಿಳುನಾಡಿನ ಬಿಜೆಪಿ ಪ್ರಚಾರ ಘಟಕದ ಉಪಾಧ್ಯಕ್ಷ ಮಹೇಶ್​ ಅವರ ಯೋಜನೆಯಾಗಿದ್ದು, ಮೋದಿ ಇಡ್ಲಿ ಸಂಬಂಧಪಟ್ಟ ಪೋಸ್ಟರ್​​ಗಳು ಸೇಲಂನಲ್ಲಿ ಎಲ್ಲ ಕಡೆ ರಾರಾಜಿಸುತ್ತಿವೆ. ಪೋಸ್ಟರ್​ನಲ್ಲಿ ಎಡಗಡೆ ಪ್ರಧಾನಿ ಮೋದಿಯವರ ಫೋಟೋ ಇದೆ..ಬಲಗಡೆ ಮಹೇಶ್ ಚಿತ್ರವಿದೆ. ಹಾಗೇ ಇಡ್ಲಿ, ಸಾಂಬಾರ್​ ಚಿತ್ರಗಳನ್ನೂ ಹಾಕಲಾಗಿದ್ದು, 10 ರೂಪಾಯಿಗೆ ನಾಲ್ಕು ಇಡ್ಲಿಗಳು ಎಂದು ಮಧ್ಯದಲ್ಲಿ ಬರೆಯಲಾಗಿದೆ.

ತಮಿಳುನಾಡಿನಲ್ಲಿ ಅಮ್ಮ ಉಣವುಗಂ (ಕ್ಯಾಂಟೀನ್)​ ಫೇಮಸ್​. ಕಡಿಮೆ ಬೆಲೆಗೆ ಹೆಚ್ಚು ಹಾಗೂ ಉತ್ತಮ ಗುಣಮಟ್ಟದ ಆಹಾರ ಸಿಗುತ್ತದೆ. ಜಯಲಲಿತಾ ಅವರು 2013ರಲ್ಲಿ ಇದನ್ನು ಪ್ರಾರಂಭಿಸುವ ಮೂಲಕ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದರು.

error: Content is protected !! Not allowed copy content from janadhvani.com