janadhvani

Kannada Online News Paper

ಎಸ್‌ ವೈ ಎಸ್ ಮಸೀದಿಕೆರೆ: ಆಯುಷ್ಮಾನ್ ಕಾರ್ಡ್ ಅಭಿಯಾನ ಯಶಸ್ವಿ

ಎಸ್‌ ವೈ ಎಸ್ ಮಸೀದಿಕೆರೆ ಯುನಿಟ್ ವತಿಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಶಿಬಿರವನ್ನು ದಿನಾಂಕ 31/8/20 ರ ಸೋಮವಾರ ಮಸೀದಿಕೆರೆ ಬದ್ರಿಯ ಶಾದಿಮಹಲ್ ನಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ರವರು ಜಿಲ್ಲಾ SYS ಪ್ರದಾನ ಕಾರ್ಯದರ್ಶಿ T T ಇಸ್ಮಾಯಿಲ್ ರವರಿಗೆ ಆರೋಗ್ಯ ಕಾರ್ಡ್ ನೀಡುವುದರ ಮೂಲಕ ನೆರವೇರಿಸಿದರು.ಕಾರ್ಯವು ಬೆಳಗ್ಗೆ 9 ಗಂಟೆಯಿಂದ 6 ಗಂಟೆಯವರೆಗೆ ನಡೆಯಿತು.ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಇದರ ಸದುಪಯೋಗವನ್ನು ಪಡೆದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಮರ್ .ಸಹ ಕಾರ್ಯದರ್ಶಿ ಲತೀಫ್ .ಅಶ್ರಫ್ MK.ಸೈದಾಲಿ ಬಾವ.ಇಲಿಯಾಸ್ BM.ಮೊಯಿನುದ್ದೀನ್.ಹುಸೈನ್ ಮುಸ್ಲಿಯಾರ್ .S H ಮೊಯ್ಯದ್ದಿ ಇನ್ನಿತರರು ಪಾಲ್ಗೊಂಡರು.

error: Content is protected !! Not allowed copy content from janadhvani.com