janadhvani

Kannada Online News Paper

ಪವಿತ್ರ ಖುರ್ ಆನ್ ಗ್ರಂಥ ದಹನ- ವಿಶ್ವಸಂಸ್ಥೆ ನಾಗರೀಕತೆಗಳ ಒಕ್ಕೂಟ ಖಂಡನೆ

ವಿಶ್ವಸಂಸ್ಥೆ, ಆಗಸ್ಟ್. 30:ಸ್ವೀಡನ್ ದೇಶದ ನಗರ ಮಲ್ಮೋದಲ್ಲಿ ಬಲಪಂಥೀಯ ತೀವ್ರವಾದಿಗಳು ಮುಸ್ಲಿಮರ ಪವಿತ್ರ ಗ್ರಂಥ ಖುರ್ ಆನ್ ದಹಿಸಿರುವುದನ್ನು ವಿಶ್ವಸಂಸ್ಥೆಯ ನಾಗರೀಕತೆಗಳ ಒಕ್ಕೂಟದ ಮುಖ್ಯಸ್ಥ ಮಿಗುಯೆಲ್ ಮೊರಟಿನೋಸ್ ಖಂಡಿಸಿದ್ದಾರೆ.

ಮಾಲ್ಮೋದಲ್ಲಿ ಗಲಭೆಗೆ ಕಾರಣವಾಗಿರುವ ಶುಕ್ರವಾರ ನಡೆದ ಈ ಘಟನೆ ಪರಮ ನೀಚ ಕೃತ್ಯವಾಗಿದ್ದು, ಯಾರೂ ಒಪ್ಪುವಂತದ್ದಲ್ಲ ಅಥವಾ ಸಮರ್ಥನೀಯವಲ್ಲ ಎಂದು ಮಿಗುಯೆಲ್ ಮೊರಟಿನೋಸ್ ವಕ್ತಾರ ನಿಹಾಲ್ ಸಾಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಲಪಂಥೀಯ ಉಗ್ರಗಾಮಿಗಳು ಹಾಗೂ ಇತರ ಮೂಲಭೂತವಾದಿ ಗುಂಪುಗಳು ನಡೆಸುವ ಇಂತಹ ಕೃತ್ಯಗಳು ಹಿಂಸಾಚಾರವನ್ನು ಪ್ರಚೋದಿಸಿ, ಸಮುದಾಯಗಳ ನಡುವಣ ಸೌಹಾರ್ದತೆಯನ್ನು ಹಾಳು ಗೆಡವುತ್ತವೆ ಎಂದು ಮೊರಟಿನೋಸ್ ಹೇಳಿದ್ದಾರೆ.

error: Content is protected !! Not allowed copy content from janadhvani.com