janadhvani

Kannada Online News Paper

ಪ್ರೊಫೆಸರ್ ಅಬ್ದುಲ್ ರಹ್ಮಾನ್ ಇಂಜಿನಿಯರ್ ನಿಧನ: ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂತಾಪ

ರಿಯಾದ್ ; ಕರ್ನಾಟಕದ ಪ್ರಮುಖ ಸುನ್ನೀ ನೇತಾರ , ರಾಜ್ಯದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ( SSF ) ಹಾಗೂ ಸುನ್ನೀ ಯುವ ಜನ ಸಂಘ (SYS ) ಗಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸುನ್ನತ್ ಜಮಾಹತ್ ನ ಕಾರ್ಯಚರಣೆಯಲ್ಲಿ ಮುಂಚೂಣಿಯಲ್ಲಿದ್ದು ಕೊಂಡು ಶೈಕ್ಷಣಿಕ , ಸಾಂಘಿಕ , ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ ಚಿಂತಕ , ಲೇಖಕ, ಬಹುಭಾಷಾ ವಾಗ್ಮಿ ಪ್ರೊಪೆಸರ್ ಅಬ್ದುಲ್ ರಹ್ಮಾನ್ ಇಂಜಿನಿಯರ್ ರವರ ಮರಣಕ್ಕೆ ಕೆ..ಸಿ. ಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ | ಶೈಖ್ ಬಾವ , ಪ್ರಧಾನ ಕಾರ್ಯದರ್ಶೀ , ಖಮರುದ್ದೀನ್ ಗೂಡಿನ ಬಳಿ, ಹಾಗೂ ಕೆ.ಸಿ. ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ . ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಮತ್ತು ಪ್ರದಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಮರಣವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಪಾರತ್ರಿಕ ವಿಜಯಕ್ಕೆ ಎಲ್ಲರೂ ಪ್ರಾರ್ಥನೆ ನಡೆಸಬೇಕೆಂದು ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com