janadhvani

Kannada Online News Paper

ಕೊರೊನಾ: ದ.ಕ.ಜಿಲ್ಲೆಯಲ್ಲಿ ಮರಣ ಸಂಖ್ಯೆ 269 ಕ್ಕೆ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೊರೊನಾ ಸೋಂಕಿತ ಏಳು ಮಂದಿ ಮೃತಪಡುವ ಮೂಲಕ ಒಟ್ಟು ಮರಣ ಸಂಖ್ಯೆ 269ಕ್ಕೆ ಏರಿಕೆಯಾಗಿದೆ. 229 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8878ಕ್ಕೇರಿಕೆಯಾಗಿದೆ. ಮೃತರಲ್ಲಿ 222 ಮಂದಿ ದಕ ಜಿಲ್ಲೆಯವರಾದರೆ, 47 ಮಂದಿ ಹೊರಜಿಲ್ಲೆಯವರು.

ಭಾನುವಾರ ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ ಮೂರು ಮಂದಿ ಮತ್ತು ಹೊರಜಿಲ್ಲೆಯ ನಾಲ್ಕು ಇದ್ದಾರೆ. 128 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅದರಲ್ಲಿ ನಾಲ್ಕು ಮಂದಿ ಕೋವಿಡ್‌ ಸೆಂಟರ್‌ನಿಂದ, 86 ಮಂದಿ ಮನೆಗಳಿಂದ ಮತ್ತು 38 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು 6445 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 2164 ಮಂದಿ ಸೋಂಕಿತರ ಚಿಕಿತ್ಸೆ ಮುಂದುವರಿದಿದೆ.

ಪಾಸಿಟಿವ್‌ ಆದವರಲ್ಲಿ ಮಂಗಳೂರು ತಾಲೂಕಿನ 122, ಬಂಟ್ವಾಳದ 36, ಪುತ್ತೂರಿನ 36, ಸುಳ್ಯದ 1, ಬೆಳ್ತಂಗಡಿಯ 8 ಮತ್ತು ಇತರ ಜಿಲ್ಲೆಗಳ 31 ಮಂದಿ ಇದ್ದಾರೆ. ಅವರಲ್ಲಿ 22 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. 123 ಮಂದಿಗೆ ಇನ್ ಪ್ಲುಯೆಂಜಾ ಲೈಕ್‌ ಇಲ್‌ನೆಸ್‌ ಕಂಡುಬಂದಿದ್ದು, 6 ಮಂದಿ ಉಸಿರಾಟ ಸಮಸ್ಯೆಯಿಂದ ಚಿಕಿತ್ಸೆಗೆ ತೆರಳಿದಾಗ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. 78 ಮಂದಿಗೆ ಸೋಂಕು ತಗುಲಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 86 ಪುರುಷರು ಮತ್ತು 45 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 131 ಸಿಂಪ್ಟಮ್ಯಾಟಿಕ್‌ ಮತ್ತು 50 ಪುರುಷರು, 48 ಮಹಿಳೆಯರು ಸೇರಿದಂತೆ 98 ಮಂದಿ ಅಸಿಂಪ್ಟಮ್ಯಾಟಿಕ್‌ ಪ್ರಕರಣಗಳಿವೆ. ಎಲ್ಲರಿಗೂ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ.

error: Content is protected !! Not allowed copy content from janadhvani.com