janadhvani

Kannada Online News Paper

ಪ್ರವಾದಿ ನಿಂದಕನಿಗೆ ಕಠಿಣ ಶಿಕ್ಷೆಯಾಗಲಿ-ಕರ್ನಾಟಕ ಮುಸ್ಲಿಂ ಜಮಾಅತ್ ಚಿಕ್ಕಮಗಳೂರು

ಚಿಕ್ಕಮಗಳೂರು:ನವೀನ್ ಎಂಬ ಸಮಾಜ ದ್ರೋಹಿ ಪ್ರವಾದಿಯವರ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ ನಲ್ಲಿ ಬರೆದಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸಲಾಗುತ್ತಿದೆ.ಈತನನ್ನು ಕಠಿಣ ಶಿಕ್ಷೆಗೆ ಒಳಪಡಿಸೇಕು ಎಂದು ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಅಧ್ಯಕ್ಷ ಹಾಜಿ ಮೊಹಮ್ಮದ್ ಶಾಹಿದ್ ರಜ್ವಿ ಒತ್ತಾಯಿಸಿದ್ದಾರೆ.

ನವೀನ್ ಎಂಬ ಸಮಾಜ ದ್ರೋಹಿ, ಸಮುದಾಯದ ಕೋಟ್ಯಂತರ ಮುಸ್ಲಿಮರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದುಷ್ಕೃತ್ಯ ವೆಸಾಗಿರುತ್ತಾನೆ. ಇಂಥ ದುಷ್ಕರ್ಮಿಗಳು ಸಮಾಜದಲ್ಲಿ ವಿಷಬೀಜ ಬಿತ್ತುವ ಮೂಲಕ ದೇಶವನ್ನೇ ಹಾಳು ಮಾಡುವ ದುಷ್ಕೃತ್ಯವು ಖಂಡನೀಯವಾಗಿದೆ ಎಂದು ಅವರು ತಿಳಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಬಾಂಧವರು ಶಾಂತಿ ಕಾಪಾಡುವಂತೆ ಹಾಗೂ ಕಾನೂನನ್ನು ಗೌರವಿಸಿ ಕಾನೂನಿನಲ್ಲಿ ಅವಕಾಶವಿರುವ ಹೋರಾಟದ ಮೂಲಕ ದುಷ್ಟ್ಟನನ್ನು ಶಿಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿ ಶಾಂತ ರೀತಿಯಲ್ಲಿ ಹೋರಾಟ ನಡೆಸಲು ಸದೃಢರಾಗಬೇಕಾಗಿ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದರು.

ಹಾಗು ಮುಂಬರುವ ಆಗುಸ್ಟ್ 15 ರಂದು ನಡೆಯುವ ಸ್ವಾತಂತ್ರ ದಿನಾಚರಣೆ ಯನ್ನು ಸರಳವಾಗಿ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ S Y S ಪ್ರಮುಖ ನಾಯಕ ಎ. ಯೂಸುಫ್ ಹಾಜಿ
K M J ತಾಲ್ಲೂಕು ಸಮಿತಿ ಅಧ್ಯಕ್ಷ ಆರಿಫ್ ಅಲಿ ಖಾನ್,ಮುನೀರ್, ಅಬೂಬಕರ್ ಕೆ ಪಿ, ನಾಸಿರ್, ಇನ್ನಿತರೆ ವಿವಿಧ ಸುನ್ನಿ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು ಎಂದು ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com