janadhvani

Kannada Online News Paper

SSLC: ಮರಿಯಂ ಮುಬಶ್ಶಿರಾಗೆ ಡಿಸ್ಟಿಂಕ್ಷನ್ – ದಾರುಲ್ ಅಶ್ಅರಿಯ ಶಾಲೆಗೆ ಕೀರ್ತಿ

ವಿಟ್ಲ: ಇಲ್ಲಿನ ಸುರಿಬೈಲು ದಾರುಲ್ ಅಶ್ಅರಿಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮರಿಯಂ ಮುಬಶ್ಶಿರಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 556 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿರುವ ಮುಬಶ್ಶಿರಾ ಶಾಲೆಗೆ ಕೀರ್ತಿ ತಂದಿರುತ್ತಾರೆ.

ಬೊಳ್ಮಾರ್ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಅಮೀನಾ ದಂಪತಿಗಳ ಪುತ್ರಿ ಮುಬಶ್ಶಿರಾ, ವೈದ್ಯಕೀಯ ಶಿಕ್ಷಣವನ್ನು ಕರಗತ ಮಾಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

ಮುಬಶ್ಶಿರಾ ಅವರ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಶಾಲಾ ಸಮಿತಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.