janadhvani

Kannada Online News Paper

ಅಲ್ ರೈಹಾನ್ ಫೌಂಡೇಶನ್ ಯು.ಎ.ಇ ಅಂಬ್ಲಮೊಗರು ನೂತನ ಸಮಿತಿಗೆ ಚಾಲನೆ

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ನಿರ್ಗತಿಕರ ಸಹಾಯ ಹಾಗು ವಿದೇಶದಲ್ಲಿ ದುಡಿಯುತ್ತಿರುವ ಪ್ರವಾಸಿಗಳ ಕ್ಷೇಮ ಉನ್ನತಿಗಾಗಿ ಅಲ್-ರೈಹಾನ್ ಅಂಬ್ಲಮೊಗರು ಯು.ಎ.ಇ ನೂತನ ಸಮಿತಿಯು ಕಮಾಲುದ್ದೀನ್ ಅಂಬ್ಲಮೊಗರು ಇವರ ಅಧ್ಯಕ್ಷತೆಯಲ್ಲಿ ಇತೀಚೆಗೆ ಆನ್ಲೈನ್ ಮುಖಾಂತರ ನಡೆಯಿತು.

ಅಲ್-ರೈಹಾನ್ ಇದರ ನೂತನ ರಚನಾ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಫೈಝಲ್ ಪರೇಕಳ ಕುಂಡೂರ್, ನೂತನ ಅಧ್ಯಕ್ಷರಾಗಿ ಕಮಾಲುದ್ದೀನ್ ಅಂಬ್ಲಮೊಗರು,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಮ್ ದೋಟ,ಕೋಶಾಧಿಕಾರಿಯಾಗಿ ಮುಹಮ್ಮದ್ ಶಿಹಾಬ್ ಹಾಗು ಇಂತಿಯಾಝ್,ಉಪಾಧ್ಯಕ್ಷರಾಗಿ ಅಝೀಝ್ ಮದಕ ಹಾಗು ಅಬ್ದುಲ್ ಸಲಾಂ ಮದಕ,ಜೊತೆ ಕಾರ್ಯದರ್ಶಿಯಾಗಿ ಇರ್ಫಾಝ್ ದೋಟ ಹಾಗು ಅಝೀಝ್ ಎಸ್.ಎಂ ಹಾಗು ಸಲಹಾ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್ ಕುಂಡೂರ್,ಅಬೂಬಕ್ಕರ್ ಎಸ್.ಬಿ,ರಝಕ್ ಮದಕ,ಲತೀಫ್ ಬಂದರ್ಪಡೆ,ಲತೀಫ್ ಎಸ್.ಎಂ ಮತ್ತು ಹಂಝ ಮದಕ ಇವರನ್ನು ನೇಮಿಸಲಾಯಿತು ಮತ್ತು ಹತ್ತು ಮಂದಿಯನ್ನುಲ್ ಕಾರ್ಯಕಾರಿ ಸದಸ್ಯರಾಗಿ ಆರಿಸಲಾಯಿತು.

ಅಲ್-ರೈಹಾನ್ ಅಂಬ್ಲಮೊಗರು ಯು.ಎ.ಇ ಸಮಿತಿಯು ಹಲವಾರು ಯೋಜನೆಯನ್ನು ಹೊಂದಿದ್ದು ಅದರ ಒಂದೊಂದು ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಈ ಯೋಜನೆಯು ನಾಡು ಹಾಗು ಪ್ರವಾಸಿಗರ ಕ್ಷೇಮ ಉನ್ನತಿಗಾಗಿ ಸಹಕಾರ ನೀಡಲಾಗುವುದು ಎಂದು ಅಲ್-ರೈಹಾನ್ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ರಚನಾ ಸಭೆಯ ಕೊನೆಯಲ್ಲಿ ಅಬ್ದುಲ್ ಸಲಾಂ ದನ್ಯವಾದಗೈದರು.

error: Content is protected !! Not allowed copy content from janadhvani.com