ಮಂಗಳೂರು : SSF ಕರ್ನಾಟಕ ರಾಜ್ಯ HELP DESK ಇದರ ನಿರ್ದೇಶನದಂತೆ ಪ್ರಾಕೃತಿಕ ವಿಕೋಪ ನೆರೆ ಸಂಧರ್ಭಗಳಲ್ಲಿ ತುರ್ತಾಗಿ ಕಾರ್ಯಾಚರಿಸಲು SSF ದ.ಕ. ಈಸ್ಟ್ ಝೋನ್ ವ್ಯಾಪ್ತಿಯ ಐದು ಡಿವಿಷನ್‌ಗಳಲ್ಲಿ 500 ಮಂದಿಯ ಕ್ಯೂ ಟೀಮ್ ತುರ್ತು ಸೇವಾ ತಂಡ ಸನ್ನದ್ದವಾಗಿದೆ ಎಂದು ಕ್ಯೂ ಟೀಮ್ ಝೋನಲ್ ಅಡ್ಮಿನ್ ಝುಬೈರ್ ಸಖಾಫಿ ಗಟ್ಟಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SSF ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಝೋನ್ ವ್ಯಾಪ್ತಿಯ ಪ್ರತೀ ಡಿವಿಷನ್ ಕೇಂದ್ರಗಳಲ್ಲಿ ಸದಾ ಸಮಯ ತುರ್ತು ಸೇವೆಗೆ ಸನ್ನದ್ದರಾಗಿರುವ ಸಕ್ರಿಯ ಕಾರ್ಯಕರ್ತರ ತುರ್ತು ಸೇವಾ ತಂಡ ರಚಿಸಲಾಗಿದ್ದು ಯಾವುದೇ ಸಂಧರ್ಭದಲ್ಲೂ ತಕ್ಷಣ ಕಾರ್ಯಾಚರಣೆಗೆ ಇಳಿಯಲು ಸಿದ್ದರಾಗಿದ್ದಾರೆ. SSF ದ.ಕ. ಈಸ್ಟ್ ಝೋನ್ ವ್ಯಾಪ್ತಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ವಿಟ್ಲ ಡಿವಿಷನ್‌ಗಳಲ್ಲಿ ತಲಾ 100 ಮಂದಿಯಂತೆ ಐದು ಡಿವಿಷನ್ ಡಿವಿಷನ್‌ಗಳಲ್ಲಿ 500 ಮಂದಿಯ ತಂಡ ಸಿದ್ದವಾಗಿದೆ ಎಂದು ಅವರು ತಿಳಿಸಿದರು.
ತುರ್ತು ಸಹಾಯಕ್ಕಾಗಿ ಈ ಕೆಳಗಿನ ನಂಬರ್‌ಗಳನ್ನು ಸಂಪರ್ಕಿಸಬಹುದಾಗಿದೆ.
ಈಸ್ಟ್ ಝೋನ್ : 99644 02216, 9632659290, 95912 73693
ಪುತ್ತೂರು : +917348942079
ಬೆಳ್ತಂಗಡಿ : 7619305365
ಉಪ್ಪಿನಂಗಡಿ : 8722552235
ಸುಳ್ಯ : 94803 07435
ವಿಟ್ಲ :7353881826