janadhvani

Kannada Online News Paper

ಅಂತರಾಷ್ಟ್ರೀಯ ವಿಮಾನ ಪುನರಾರಂಭ: 31 ದೇಶಗಳಿಗೆ ತಾತ್ಕಾಲಿಕ ನಿಷೇಧ

ಕುವೈತ್ ಸಿಟಿ: ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸೇವೆಗಳು ಪುನರಾರಂಭಗೊಂಡಿದೆ. ಆದರೆ, ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಭಾರತ ಸೇರಿದಂತೆ 31 ದೇಶಗಳ ಸೇವೆಗಳಿಗೆ ತಾತ್ಕಾಲಿಕ ನಿಷೇಧ ಹೇರಿದೆ. ಕೋವಿಡ್ ಹರಡುವುದನ್ನು ತಡೆಯಲು ಆರೋಗ್ಯ ಸಚಿವಾಲಯದ ನಿರ್ದೇಶನವನ್ನು ಅನುಸರಿಸಿ ಈ ಕ್ರಮ ಎನ್ನಲಾಗಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಫಿಲಿಪೈನ್ಸ್ ಮತ್ತು ಇರಾನ್‌ನ ವಲಸಿಗರನ್ನು ಈ ಹಿಂದೆ ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿತ್ತು. ಈ ಏಳು ದೇಶಗಳ ಜೊತೆಗೆ, ಚೀನಾ, ಬ್ರೆಜಿಲ್, ಲೆಬನಾನ್, ಇಟಲಿ, ಕೊಲಂಬಿಯಾ, ಸಿಂಗಾಪುರ್, ಈಜಿಪ್ಟ್ ಮತ್ತು ಸ್ಪೇನ್ ಸೇರಿದಂತೆ ಹೆಚ್ಚಿನ 29 ದೇಶಗಳನ್ನು ಇದಕ್ಕೆ ಒಳಪಡಿಸಲಾಗಿದೆ. ಮುಂದಿನ ಸೂಚನೆವರೆಗೂ ಈ ಸ್ಥಳಗಳಿಂದ ಯಾವುದೇ ವಾಣಿಜ್ಯ ವಿಮಾನಗಳು ಇರುವುದಿಲ್ಲ.

ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ದೇಶಗಳ ಮೇಲೆ ನಿಷೇಧ ಹೇರಲಾಗಿದೆ ಮತ್ತು ಯಾವುದೇ ಸಮಯದಲ್ಲಿ ಪಟ್ಟಿಯ ಬದಲಾವಣೆ ಸಾಧ್ಯತೆಯಿದೆ ಎಂದು ಸರ್ಕಾರದ ವಕ್ತಾರ ತಾರಿಕ್ ಅಲ್-ಮಸ್ತಮ್ ಟ್ವೀಟ್ ಮಾಡಿದ್ದಾರೆ.

ವಿಮಾನ ನಿಲ್ದಾಣ ತೆರೆದಿದ್ದರೂ ಸಹ, ಪ್ರಸ್ತುತ ಪರಿಸ್ಥಿತಿಯಲ್ಲಿ ವಿದೇಶ ಪ್ರವಾಸವನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದು ಅವರು ಹೇಳಿದರು. ಕೋವಿಡ್ ಪ್ರಮಾಣಪತ್ರವಿಲ್ಲದೆ ವಿದೇಶಿ ಪ್ರಜೆಗಳನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದರು.

error: Content is protected !! Not allowed copy content from janadhvani.com