ಇಸ್ಹಾಕ್ ಸಿ.ಐ.ಫಜೀರ್
(KCF AL HAASA.
ಪವಿತ್ರ ‘ದ್ಸುಲ್‌ಹಜ್’ ತಿಂಗಳು ಸಮಾಗಮಗೊಳ್ಳುತ್ತಿದ್ದಂತೆ ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ‘ಭರವಸೆಯ ಬೆಳಕು’ ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್)ನ ಸೌದಿ ಅರೇಬಿಯಾದ ವಿವಿಧ ದಿಕ್ಕಿನಲ್ಲಿರುವ ಕಾರ್ಯಕರ್ತರ ತಂಡ ಜಗತ್ತಿನ ವಿವಿಧ ದಿಕ್ಕಿನಿಂದ ಪವಿತ್ರ ಹಜ್ಹ್ ನಿರ್ವಹಿಸಲು ಮಕ್ಕಾ,ಮದೀನಾ ತಲುಪುವ ಹಜ್ಹ್ ಯಾತ್ರಾರ್ಥಿಗಳ ಸೇವೆಗೈಯ್ಯಲು ಪ್ರತಿ ವರ್ಷ ಸಕಲ ಸನ್ನದ್ಧದೊಂದಿಗೆ ಧುಮುಕುತ್ತಾರೆ.
ಹಜ್ಹ್‌ನ ಕಡೆಯ ಮೂರು ದಿನ (ದ್ಸುಲ್‌ಹಜ್ಹ್ -11,12,13) ಮಿನ,ಮುಝ್ಧಲಿಫಾದಲ್ಲಿ ಲಕ್ಷಾಂತರ ಹಜ್ಜಾಜಿಗಳ ನೂಕು ನುಗ್ಗಲಿನಲ್ಲಿ
ಕಳೆದ ಐದಾರು ವರ್ಷಗಳಿಂದ ದಣಿವರಿಯದ ನಿಸ್ವಾರ್ಥ ಸೇವೆಯ ಫಲವಾಗಿ ಸೌದಿ ಸರಕಾರದ,ಆರೋಗ್ಯ ಇಲಾಖೆ ನೀಡುವ ಪ್ರಶಂಸ ಪತ್ರ ತನ್ನದಾಗಿಸಿಕೊಂಡ ಹೆಗ್ಗಳಿಕೆ ಕೆಸಿಎಫ್‌ಗೆ ಸಲ್ಲುತ್ತದೆ.
ಕಳೆದ ಮೂರು ಬಾರಿ ಹಜ್ಹಾಜಿಗಳ ಸೇವೆ ಮಾಡಲು ಕೆಸಿಎಫ್ ಮೂಲಕ ನನಗೆ ಅವಕಾಶ ಸಿಕ್ಕಿರುವುದು ಲೈಫ್ ಲಾಂಗ್ ಮರೆಯುವಂತದಲ್ಲ.
ಮಕ್ಕಾ ಒಂದು ಪ್ರದೇಶ ಬಿಟ್ಟು ಸೌದಿ ಅರೇಬಿಯಾದ ಇತರ ಪ್ರದೇಶಗಳಲ್ಲಿರುವ ಕೆಸಿಎಫ್ ಕಾರ್ಯಕರ್ತರು ಹಜ್ಹ್ ಕರ್ಮದ ಕಡೆಯ ಮೂರು ದಿನ ಮಿನ,ಮುಝ್ಧಲಿಫಾದಲ್ಲಿ ಮಾತ್ರ ಹಜ್ಜಾಜಿಗಳ ಸೇವೆ ಮಾಡುವುದಾದರೆ,
ಮಕ್ಕಾ(ಮದೀನಾ)ಪರಿಸರದಲ್ಲಿರುವ ಕೆಸಿಎಫ್ ಕಾರ್ಯಕರ್ತರು ವಿದೇಶದಿಂದ ಹಜ್ಹಾಜಿಗಳನ್ನು ಹೊತ್ತುಕೊಂಡು ಬರುವ ಮೊದಲ ವಿಮಾನ ಮಕ್ಕಾ,ಮದೀನಾ ತಲುಪುವ ಮೊದಲದಿನದಿಂದ ಹಜ್ಜ್ ಕರ್ಮ ಮುಗಿದು ಹಜ್ಜಾಜಿಗಳ ಕಡೆಯ ವಿಮಾನ ಸೌದಿ ಬಿಟ್ಟು ತೆರಳುವವರೆಗೂ (40 ದಿನ) ದಿನದ 24 ಗಂಟೆಯೂ ತಮ್ಮ ದುಡಿಮೆಯ ನಡುವೆ ಪ್ರತಿಫಲಾಪೇಕ್ಷೆ ಇಲ್ಲದೆ ಹಜ್ಜಾಜಿಗಳ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ.
ಆದರೆ,ಈ ಬಾರಿ ನಮ್ಮ ನಿರೀಕ್ಷೆಯೆಲ್ಲಾ ಉಲ್ಟಾ ಪಲ್ಟಿಯಾಗಿದೆ.
ಕೋವಿಡ್-19 ಮಹಾಮಾರಿಯಿಂದ
ಹಜ್ಹಾಜಿಗಳ ಸೇವೆ ನನ್ನಂತಹ ನೂರಾರು KCF-HVC (Hajj volunteer core) ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಇನ್ಶಾಅಲ್ಲಾಹ್ ಮುಂದಿನ ವರ್ಷದಿಂದ ಹಜ್ಜಾಜಿಗಳ ಸೇವೆಯನ್ನು ಮತ್ತೆ ಮುಂದುವರಿಸುವ ನಿರೀಕ್ಷೆ ನಮ್ನಲ್ಲಿದೆ
ಕರುಣಾಮಯಿ ಅಲ್ಲಾಹನು ಅನುಗ್ರಹಿಸಲಿ.
“ತ್ಯಾಗ ಬಲಿದಾನಗಳ ಹಬ್ಬ
ಬಕ್ರೀದ್ ಶುಭಾಶಯಗಳು.”















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ