janadhvani

Kannada Online News Paper

ಮುಂಬೈ: ಬಾಲಿವುಡ್ ನಟ ಅಮಿತಾಬ್​ ಬಚ್ಚನ್​ಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಅಭಿಷೇಕ್​ ಬಚ್ಚನ್​ ಅವರಲ್ಲಿಯೂ ಸೋಂಕು ದೃಢಪಟ್ಟಿತ್ತು. ಬಳಿಕ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಗೂ ಕರೊನಾ ಪಾಸಿಟಿವ್​ ವರದಿ ಬಂದಿತ್ತು. ಸದ್ಯ ಅಭಿಷೇಕ್​ ಮತ್ತು ಅಮಿತಾಬ್​ಗೆ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ಸೋಂಕಿನ ಲಕ್ಷಣಗಳು ಕಡಿಮೆ ಕಾಣಿಸಿಕೊಂಡಿರುವ ಐಶ್ವರ್ಯಾ ಮತ್ತು ಆರಾಧ್ಯಾಗೆ ಮನೆಯಲ್ಲಿಯೇ ಹೋಮ್​ ಕ್ವಾರಂಟೈನ್​ ಒಳಪಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಅಭಿಷೇಕ್​ ಬಹಿರಂಗಪಡಿಸಿದ್ದು, ‘ಐಶ್ವರ್ಯಾ ಮತ್ತು ಆರಾಧ್ಯಾಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಜಲ್ಸಾ ಮನೆಯಲ್ಲಿಯೇ ಸೆಲ್ಫ್​ ಕ್ವಾರಂಟೈನ್​ನಲ್ಲಿದ್ದಾರೆ. ಬಿಎಂಸಿಯೂ ಸಹ ನಿಗಾವಹಿಸಿದೆ. ನನ್ನ ತಾಯಿಯ ವರದಿ ನೆಗೆಟಿವ್​ ಬಂದಿದೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ’ ಎಂದು ಅಭಿಷೇಕ್​ ಟ್ವಿಟ್ ಮಾಡಿದ್ದಾರೆ.

ಇನ್ನು ಅಮಿತಾಬ್​ಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಮಿತಾಬ್​ ಅವರ ಮನೆಯನ್ನು ಸೋಂಕು ನಿವಾರಕ ಸಿಂಪಡಣೆ ಮಾಡಿ, ಇಡೀ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್​ ಎಂದು ಘೋಷಿಸಲಾಗಿತ್ತು. ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮಿತಾಬ್​, ಅಲ್ಲಿದ್ದುಕೊಂಡೇ ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ್ದರು. ಯಾವುದೇ ಗಾಬರಿ ಬೇಡ, ನಾನು ಕ್ಷೇಮ ಎಂದಿದ್ದರು. (ಏಜೆನ್ಸೀಸ್​)

error: Content is protected !!
%d bloggers like this: