janadhvani

Kannada Online News Paper

ಸಚಿವ ಪುತ್ರನ ಬೆದರಿಕೆಗೆ ಕ್ರಮ ಕೈಗೊಳ್ಳದ ಮೇಲಧಿಕಾರಿಗಳು- ಮಹಿಳಾ ಪೇದೆ ರಾಜೀನಾಮೆ

ಸೂರತ್: ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ಗುಜರಾತ್ ಆರೋಗ್ಯ ಸಚಿವನ ಪುತ್ರ ಬೆದರಿಕೆ ಒಡ್ಡಿ ಕೊನೆಗೆ ಮಹಿಳಾ ಪೇದೆ ಸ್ವಯಂ ರಾಜೀನಾಮೆ ನೀಡಿ ಹುದ್ದೆ ತೊರೆದ ಗಂಭೀರ ಪ್ರಕರಣವೊಂದು ಸೂರತ್ ನಿಂದ ವರದಿಯಾಗಿದೆ.

ಎಂದಿನಂತೆ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಸುನೀತಾ ಯಾದವ್ ಎಂಬ ಮಹಿಳಾ ಪೇದೆ ರಾತ್ರಿ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಗುಜರಾತ್ ಆರೋಗ್ಯ ಮಂತ್ರಿ ಕುಮಾರ್ ಕನಾನಿ ಯವರ ಮಗ ಪ್ರಕಾಶ್ ನ ಕಾರನ್ನು ತಡೆದು ವಿಚಾರಿಸಿದ ಸಂದರ್ಭ ನಡೆದ ಮಾತಿನ ಸಮರದ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿದೆ. ಈ ಆಡಿಯೋದಲ್ಲಿ ವ್ಯಕ್ತಿಯೊಬ್ಬ ಸುನೀತಾ ಯಾದವ್ ರಿಗೆ “ನಿನ್ನನ್ನು ಇದೇ ಜಾಗಲ್ಲಿಯೇ 365 ದಿನ ಕರ್ತವ್ಯ ನಿರ್ವಹಿಸುವಂತೆ ಮಾಡುವ ಅಧಿಕಾರ ನನ್ನಲ್ಲಿದೆ” ಎಂದು ಬೆದರಿಕೆ ಒಡ್ಡುತ್ತಿರುವುದು ಕೇಳಿ ಬರುತ್ತದೆ.

ಈ ಸಂದರ್ಭ ತನ್ನ ಮೇಲಧಿಕಾರಿಯನ್ನು ಫೋನ್ ಮೂಲಕ ಸಂಪರ್ಕಿಸಿದ ಪೊಲೀಸ್ ಪೇದೆಗೆಯೇ ಬುದ್ದಿ ಹೇಳಿದ ಮೇಲಧಿಕಾರಿ ಸುನೀತಾ ಯಾದವ್ ರಿಗೆ ಸ್ಥಳದಿಂದ ಹೋಗುವಂತೆ ಅಜ್ಞಾಪಿಸಿದ್ದಾರೆ ಘಟನೆಯಿಂದ ಮನ ನೊಂದ ಪೊಲೀಸ್ ಪೇದೆ ಮರುದಿವಸ ತನ್ನ ಹುದ್ದೆಗೆ ಸ್ವಯಂ ರಾಜೀನಾಮೆ ನೀಡಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆ ಬುಧವಾರ ರಾತ್ರಿ 10.30ಕ್ಕೆ ಮಂಗಾಧ್ ಚೌಕ್ ನಲ್ಲಿ ನಡೆದಿತ್ತು.

ಭೇಟಿ ಬಚಾವೋ ಆಂದೋಲನದ ಮೂಲಕ ಹೆಸರುವಾಸಿಯಾಗಲು ಶ್ರಮ ನಡೆಸುತ್ತಿರುವ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿಯೇ ಇಂತಹ ಘಟನೆ ನಡೆಯುತ್ತಿರುವುದು ಮಾತ್ರವಲ್ಲದೆ ಪ್ರಧಾನಿಯ ತವರೂರಾದ “ಗುಜರಾತ್ ಮಾಡೆಲ್” ರಾಜ್ಯದಲ್ಲಿಯೇ ಇಂತಹ ಘಟನೆ ನಡೆಯುವುದು ಅವಮಾನಕರ ಮತ್ತು ಅಮಾನವೀಯ.

error: Content is protected !! Not allowed copy content from janadhvani.com