janadhvani

Kannada Online News Paper

ನಿಯಂತ್ರಣದಿಂದ ಕೈ ತಪ್ಪಿ ಹೋಗುತ್ತಿರುವ ಕೊರೋನಾ ರಾಜ್ಯದಲ್ಲಿ ಒಂದೇ ದಿನ 2000 ಸನಿಹಕ್ಕೆ ಪಾಸಿಟಿವ್

ಬೆಂಗಳೂರು : ಸರಕಾರದ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಕೊರೋನಾ ಪಾಸಿಟಿವ್ ಕೇಸ್ ದಾಖಲಾಗುತ್ತಿದ್ದು ಸರಕಾರಕ್ಕೆ ಹಾಗೂ ಜನರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

ನಿನ್ನೆ ಸಾಯಂಕಾಲ 5 ರಿಂದ ಇಂದು ಸಾಯಂಕಾಲದವರೆಗೆ ರಾಜ್ಯದಲ್ಲಿ 1925 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು ರಾಜ್ಯ ರಾಜಧಾನಿಯಲ್ಲಿ 1235 ಪ್ರಕರಣಗಳು ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 147 ಪಾಸಿಟಿವ್ ಪತ್ತೆಯಾಗಿದ್ದು 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದೆಲ್ಲದರ ಮಧ್ಯೆ ಇಂದು ಒಂದೇ ದಿವಸ 603 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ.

error: Content is protected !! Not allowed copy content from janadhvani.com