janadhvani

Kannada Online News Paper

ಮನೆಯ ಮೇಲೆ ಗುಡ್ಡ ಕುಸಿತ- ಮಕ್ಕಳಿಬ್ಬರ ದಾರುಣ ಅಂತ್ಯ

ಮಂಗಳೂರು: ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಳಿ ರವಿವಾರ ನಡೆದಿದೆ.

ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇಬ್ಬರು ಮಕ್ಕಳು ಸಹ್ಲಾ (10)ಸಫ್ವಾನ್( 16) ಮಣ್ಣಿನಡಿಯಲ್ಲಿ ಸಿಲುಕಿದ್ದು, ಸತತ 5 ಗಂಟೆಗಳ ಕಾರ್ಯಾಚರಣೆಯಲ್ಲಿ ಮಕ್ಕಳ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನೂ ಎಂಟು ಮನೆಗಳು ಅಪಾಯದಲ್ಲಿದೆ.

ಗುಡ್ಡ ಇನ್ನೂ ಕುಸಿಯುತ್ತಿದೆ ಎನ್ನಲಾಗಿದೆ. ತೆಂಗಿನ ಮರ ಸೇರಿದಂತೆ ಕೆಲವು ಮರಗಳು ಮಣ್ಣಿನ ಜೊತೆಗೆ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿ, ಸಿಲುಕಿರುವವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿರಿ...