janadhvani

Kannada Online News Paper

ಪುಣೆಯಲ್ಲೊಬ್ಬ ವಿಶಿಷ್ಟ ವ್ಯಕ್ತಿ; ಮಾಸ್ಕನ್ನೂ ಬಂಗಾರದಲ್ಲಿ ಮಾಡಿಸಿಕೊಂಡ

ಮಹಾರಾಷ್ಟ್ರ: ಕೊರೋನಾ ಜಗತ್ತಿನಾದ್ಯಂತ ಹಲವಾರು ನಾಶ ನಷ್ಟಗಳನ್ನು ಮಾಡಿದ್ದು ಲಕ್ಷಾಂತರ ಜನರ ಉದ್ಯೋಗಕ್ಕೆ ಕತ್ತರಿ ಹಾಕಿದೆ. ವ್ಯಾಪಾರಿಗಳ ವ್ಯಾಪರವನ್ನೂ ಜೀವನವನ್ನೂ ಕಸಿದುಕೊಂಡಿದೆ.

ಆದರೆ ಇದ್ಯಾವುದರ ಪರಿವೆಯೇ ಇಲ್ಲದಂತೆ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಾಡೆ ಎಂಬವನೊಬ್ಬ ಮುಖಕ್ಕೆ ಧರಿಸುವ ಮಾಸ್ಕನ್ನೂ ಕೂಡಾ ಚಿನ್ನದಿಂದ ಮಾಡಿಸಿ ಧರಿಸುತ್ತಿದ್ದು ಇದರಲ್ಲಿ ಉಸಿರಾಟಕ್ಕೆ ತೊಂದರೆ ಯಾಗದಂತೆ ಸೂಕ್ಷ್ಮ ರಂಧ್ರಗಳೂ ಕೂಡಾ ಇವೆ ಆದರೆ ಇದು ಆರೋಗ್ಯ ಇಲಾಖೆಯ ಮಾನ್ಯತೆ ಪಡೆಯಬಲ್ಲುದೇ ಎಂದು ನನಗೆ ಗೊತ್ತಿಲ್ಲ ಎಂದು ಶಂಕರ್ ಹೇಳುತ್ತಾರೆ.

ಅಷ್ಟಕ್ಕೂ ಈ ಮಾಸ್ಕ್ ತಯಾರಿಸಲು 2.89 ಲಕ್ಷ ಖರ್ಚು ಮಾಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಅದೆಷ್ಟೋ ಜನ ಎಲ್ಲೆಡೆ ವ್ಯಾಪಕವಾಗಿದ್ದು ಅದರೆಡೆಯಲ್ಲಿ ಇಂತಹ ಶೋಕಿ ಲಾಲಾ ಗಳು ತಮ್ಮ ಶೋಕಿ ಪ್ರದರ್ಶವನ್ನು ಮುಂದುವರಿಸುತ್ತಿರುವುದು ಖೇದಖರ.

error: Content is protected !! Not allowed copy content from janadhvani.com