janadhvani

Kannada Online News Paper

ಮಾದರಿ ಮೌಲಿದ್ ಮಜ್ಲಿಸ್ ಚಾಲನೆ ಹಾಗೂ ಕಾರ್ಯಕಾರಿಣಿ ಸಭೆ

ಜಾಮಿಆ ಮರ್ಕಝ್ ಕಲ್ಲಿಕೋಟೆ ಇದರ ಕರ್ನಾಟಕದ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಕರ್ನಾಟಕ ಸಖಾಫಿ ಕೌನ್ಸಿಲ್ ಇದರ ಕಾರ್ಯಕಾರಿಣಿ ಸಭೆ ಹಾಗೂ ಮಾದರಿ ಮೌಲಿದ್ ಮಜ್ಲಿಸ್ ಚಾಲನೆ 7/9/2024 ಶನಿವಾರ ಅಶ್ಹರಿಯ ಕಾಟೇಜ್ ಕುಕ್ಕಾಜೆಯಲ್ಲಿ ನಡೆಯಿತು.ಕರ್ನಾಟಕ ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್ಹರಿಯ ರವರ ಘನ‌ ಅಧ್ಯಕ್ಷತೆಯಲ್ಲಿ ಜಿ.ಎಂ ಕಾಮಿಲ್ ಸಖಾಫಿ ಪೆರ್ನೆ ರವರು ದುವಾ: ನೆರವೇರಿಸಿ ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಕೋಶಾಧಿಕಾರಿ ಸೈಯ್ಯಿದ್ ಇಲ್ಯಾಸ್ ತಂಙಳ್ ಎರುಮಾಡ್ ಉದ್ಘಾಟನೆ ಮಾಡಿದರು.ಸಭೆಯಲ್ಲಿ ಸಖಾಫಿಗಳ ಹಾಗೂ ಮರ್ಕಝಿನ ಉನ್ನತಿಗೆ ಬೇಕಾಗಿ ನಾಲ್ಕು ಉಪಸಮಿತಿ ಹಾಗೂ ಅದರ ನಾಯಕರುಗಳನ್ನು ಆಯ್ಕೆ ಮಾಡಲಾಯಿತು.ಮಾದರಿ ಮೌಲಿದ್ ಗೆ ಸೈಯ್ಯಿದ್ ಇಲ್ಯಾಸ್ ತಂಙಳ್ ಎರುಮಾಡ್ ದುವಾ: ಮೂಲಕ ಚಾಲನೆ ನೀಡಿ ಸೈಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಸೈಯ್ಯಿದ್ ಮುಷ್ತಾಕ್ ತಂಙಳ್, ಶೈಖುನಾ ವಾಲೆಮುಂಡೊವು ಉಸ್ತಾದ್, ಬೊಳ್ಮಾರ್ ಉಸ್ತಾದ್ ಹಾಗೂ ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಗೌರವಾಧ್ಯಕ್ಷ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ನೇತೃತ್ವ ವಹಿಸಿದರು .ಪ್ರಾರಂಭದಲ್ಲಿ ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮುಹ್ಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲ್ ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಉಸ್ಮಾನ್ ಸಖಾಫಿ ವಂದಿಸಿದರು.