janadhvani

Kannada Online News Paper

ಪ್ರವಾದಿ ಪ್ರೇಮದ ಇತಿಹಾಸ ಮತ್ತಷ್ಟು ಗಾಂಭೀರ್ಯ ವಾಗಲಿ. ಬಿ ಎ ಅಬ್ದುಲ್ ‌ನಾಸಿರ್ ಲಕ್ಕಿಸ್ಟಾರ್

ಬಿ ಎ ಅಬ್ದುಲ್ ‌ನಾಸಿರ್ ಲಕ್ಕಿಸ್ಟಾರ್
ಅಧ್ಯಕ್ಷ ರು ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ

ಮಂಗಳೂರು : ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈ ವಸಲ್ಲಮರ ಜನ್ಮ ಮಾಸಾಚಾರಣೆಯ ಪ್ರಯುಕ್ತ ಲೋಕದ ನಾನಾ ಭಾಗದಲ್ಲೂ ಪ್ರವಾದಿ ಪ್ರಕೀರ್ತನೆಗಳು ವಿವಿಧ ಕಾರ್ಯಕ್ರಮ ಗಳು ನಡೆಯುತ್ತಿದೆ.

ಸೆಪ್ಟೆಂಬರ್‌ 16 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂ ಪ್ರವಾದಿ ಜನ್ಮ ದಿನ ಪ್ರಯುಕ್ತ ಎಲ್ಲಾ ಮಸೀದಿ ಆಡಳಿತ ಸಮಿತಿ ಅಧೀನದಲ್ಲಿ ಮಿಲಾದ್ ಮೆರವಣಿಗೆ ಗಳು ನಡೆಯುತ್ತದೆ. ಇಡೀ ಲೋಕದಲ್ಲಿ ರುವ ಪ್ರತೀ ಧರ್ಮ ವನ್ನು ಅದನ್ನು ಅನುಸರಿಸು ವವರನ್ನು ಗೌರವಿಸಲೂ, ಅದನ್ನು ಗೌರವಿಸದವನೂ ನನ್ನ ವನಲ್ಲ ಎಂಬ ಹೇಳಿಕೆಯೇ ಪ್ರವಾದಿ ಬಹು ದೊಡ್ಡ ಕಾವ್ಯ . ಇದಕ್ಕುನುಸಾರವಾಗಿ ಮುಸ್ಲಿಂ ರ ಮೆರವಣಿಗೆಗಳು ನಡೆಯುತ್ತದೆ.

ಎಲ್ಲರಿಗೂ ಸೌಹಾರ್ದ ಸಂದೇಶ ಸಾರುವುದೇ ಮೆರವಣಿಗಗಳ ಉದ್ದೇಶ ಕೂಡ. ಹಲವಾರು ಸಮಾಜಮುಖಿ ಕಾರ್ಯಕ್ರಮ ಗಳ ಮೂಲಕ ಸಮುದಾಯಕ್ಕೂ ಸಮಾಜಕ್ಕೂ ದಾರಿದೀಪವಾಗುವಂತೆ ಕಾರ್ಯಪ್ರವರ್ತಕರಾಗಲೂ ಈ ಮೂಲಕ ‌ ದ ಕ ಜಿಲ್ಲೆಯ ಎಲ್ಲಾ ಜಮಾಅತ್ ಬಾಂಧವರಲ್ಲಿ ವಿನಂತಿಸುತ್ತೇನೆ. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸಾರ್ವಜನಿಕ ಸಂಚಾರ, ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಸ್ವಯಂ ಗಮನಹರಿಸಬೇಕು. ಸಮಾಜದ ಎಲ್ಲರಿಗೂ ಮೀಲಾದ್ ಸಂದೇಶ ತಲುಪಲು ಒತ್ತು ನೀಡಬೇಕು.
ಸಮಸ್ತ ಸಮಾಜಕ್ಕೆ ಮಿಲಾದುನ್ನೆಬಿ ಶುಭಾಶಯಗಳು.

error: Content is protected !! Not allowed copy content from janadhvani.com