janadhvani

Kannada Online News Paper

ಸೆಪ್ಟೆಂಬರ್ 21: ಪುತ್ತೂರಿನಲ್ಲಿ SSF ಮೀಲಾದ್ ರ್‍ಯಾಲಿ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿಯ ಇಲಲ್ ಹಬೀಬ್ ಮೀಲಾದ್ ರ್ಯಾಲಿ ಸೆಪ್ಟಂಬರ್ 21ರಂದು 3:30ಗಂಟೆಗೆ ಪುತ್ತೂರು ದರ್ಬೆಯಿಂದ ಪ್ರಾರಂಭಗೊಂಡು ಕಿಲ್ಲೆ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ.

ಜಿಲ್ಲಾ ವ್ಯಾಪ್ತಿಯ 6 ಡಿವಿಷನ್ ಗಳ 1000ರಷ್ಟು ಕಾರ್ಯಕರ್ತರು, ಎಸ್.ವೈ.ಎಸ್ ನ ಟೀಂ ಇಸಾಬಾ ಕಾರ್ಯಕರ್ತರು, ಆಕರ್ಷಕ ಸ್ಕೌಟ್, ದಫ್, ಫ್ಲವರ್ ಶೋ ದೊಂದಿಗೆ ಪುತ್ತೂರಿನ ಹೃದಯ ಭಾಗಗಳಲ್ಲಿ ಮೀಲಾದ್ ರ್ಯಾಲಿ ಹಾದುಹೋಗಲಿದೆ.

ಜಿಲ್ಲಾ ಮೀಲಾದ್ ರ್ಯಾಲಿಯ ಯಶಸ್ವಿ ಕಾರ್ಯಾಚರಣೆಗಳಿಗಾಗಿ ಯೂಸುಫ್ ಸಾಜಾ ಗೌಸಿಯಾ (ಚೇರ್ಮಾನ್) ಡಾ. ಫಾರೂಖ್ ಕರ್ವೇಲ್ (ಜನರಲ್ ಕನ್ವೀನರ್) ಆದಂ ಹಾಜಿ ಪಡೀಲ್ (ಫಿನಾನ್ಸ್ ಕನ್ವೀನರ್) ಒಳಗೊಂಡ 33 ಮಂದಿಯ ಸ್ವಾಗತ ಸಮಿತಿ ನಾಯಕರ ತಂಡವನ್ನು ರಚಿಸಲಾಗಿದ್ದು ಪುತ್ತೂರಿನಲ್ಲಿ ಪ್ರವಾದಿ ಸಂದೇಶ ರ್ಯಾಲಿಯ ಮೆರುಗು ಕಾಣಲಿದೆ ಎಂದು ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಕಡಬ, ಪ್ರಧಾನ ಕಾರ್ಯದರ್ಶಿ ಮುಸ್ತಫ ಉಪ್ಪಿನಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.