ಮಂಗಳೂರು: ಧರ್ಮದ ಶಾಂತಿಯ ಸಂದೇಶವನ್ನು ತಲುಪಿಸುವ ಹೊಣೆಗಾರಿಕೆಯನ್ನು ಸಂಘಟನೆಗಳ ನಾಯಕರು ಸಮರ್ಪಕವಾಗಿ ನಿರ್ವಹಿಸ ಬೇಕೆಂದು ಸಮಸ್ತ ಕೇರಳ ಉಲಮಾ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯರು, ಜಾಮಿಯಾ ಸಅದಿಯಾ ಅರೇಬಿಯಾ ಕಾಲೇಜ್ ಕಾಸರಗೋಡು ಇದರ ಪ್ರೊಫೆಸರ್ ಡಾ: ಮುಹಮ್ಮದಾಲಿ ಸಖಾಫಿ ತೃಕರಿಪುರ್ ಕರೆನೀಡಿದರು. ಅವರು ಎಸ್ ವೈ ಎಸ್ ರಾಜ್ಯ ಸಮಿತಿ ಏರ್ಪಡಿಸಿದ್ದ ಜಿಲ್ಲಾ ಹಾಗೂ ಝೋನ್ ನಾಯಕರ ಮಾಹಿತಿ ಕಾರ್ಯಾಗಾರ ಎನ್ ಲೈಟನ್-24 ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ರಾಜ್ಯಾಧ್ಯಕ್ಷ ಎಂವೈ ಅಬ್ದುಲ್ ಹಫೀಳ್ ಸಅದಿ ವಹಿಸಿದರು.
ರಾಜ್ಯ ಕಾರ್ಯದರ್ಶಿ ಸಯ್ಯಿದ್ ಶಾಫಿ ನಈಮಿ ತಂಙಳ್ ಮಾರ್ನಳ್ಳಿ ಉದ್ಘಾಟಿಸಿದರು.
ಕಾರ್ಯಾಗಾರದಲ್ಲಿ ದಅವಾ ಹಾಗೂ ಇಸಾಬಾ ವಿಭಾಗದ ಕಾರ್ಯ ಯೋಜನೆಗಳನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಬಿ ಮುಹಮ್ಮದ್ ಸಾಧಿಕ್ ಮಂಡಿಸಿದರು.
ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ
ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ
ಮನ್ಸೂರ್ ಅಲಿ ಕೋಟೆಗದ್ದೆ
ಎ.ಕೆ.ಹಸೈನಾರ್ ಆನೆಮಹಲ್
ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ
ಎಸ್ ವೈ ಎಸ್ ದ.ಕ.ಜಿಲ್ಲಾ ಅಧ್ಯಕ್ಷ ಇಸ್ಹಾಕ್ ಝುಹ್ರಿ
ದ.ಕ.ಈಸ್ಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಲಿ ಮುರ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಎಸ್ ವೈ ಎಸ್ ಹಾಸನ ಜಿಲ್ಲಾ ಅಧ್ಯಕ್ಷ ಎ ಕೆ ಹಸೈನಾರ್ ಮೈಸೂರು ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಕೊಡಗು ಜಿಲ್ಲಾ ಅಧ್ಯಕ್ಷ ಹಮೀದ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಸಮಿತಿ ಸದಸ್ಯ ಬಶೀರ್ ಮದನಿ ಕೂಳೂರು ಸ್ವಾಗತಿಸಿದರು.
ರಾಜ್ಯ ಇಸಾಬ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಬೋಳಂತೂರು ಕೃತಜ್ಞತೆ ಸಲ್ಲಿಸಿದರು.