janadhvani

Kannada Online News Paper

ಸೋಂಕಿತರ ಸಂಖ್ಯೆ ಹೆಚ್ಚಳ: ಮುಂದೆ ಇರಲಿದೆ ಗಂಭೀರ ಸ್ವರೂಪ- ವೈದ್ಯಕೀಯ ಶಿಕ್ಷಣ ಸಚಿವ

ಬೆಂಗಳೂರು: ಕರ್ನಾಟಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ. ಇಂದು 308 ಪ್ರಕರಣ ಪತ್ತೆಯಾಗಿದೆ. ಇನ್ನು 3 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.

ಕಲಬುರಗಿಯಲ್ಲಿ 67, ಯಾದಗಿರಿಯಲ್ಲಿ 52, ಬೀದರ್ ನಲ್ಲಿ 42, ಬೆಂಗಳೂರು 31, ದಕ್ಷಿಣ ಕನ್ನಡದಲ್ಲಿ 30, ಧಾರವಾಡದಲ್ಲಿ 20, ಉಡುಪಿಯಲ್ಲಿ 14, ಹಾಸನದಲ್ಲಿ, ಬಳ್ಳಾರಿಯಲ್ಲಿ ತಲಾ 11, ವಿಜಯಪುರದಲ್ಲಿ 6, ರಾಯಚೂರು, ಉತ್ತರಕನ್ನಡದಲ್ಲಿ ತಲಾ 5, ಕೋಲಾರದಲ್ಲಿ 4, ದಾವಣಗೆರೆಯಲ್ಲಿ 3, ಮಂಡ್ಯ, ಹಾವೇರಿಯಲ್ಲಿ 2, ಮೈಸೂರು,ಬಾಗಲಕೋಟೆ, ರಾಮನಗರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ 6,824 ಪ್ರಕರಣಗಳ ಪೈಕಿ 3,648 ಮಂದಿ ಗುಣಮುಖರಾಗಿದ್ದಾರೆ. ಇನ್ನು 3,092 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ

ಯಾದಗಿರಿ: ಕೊರೋನಾ ಹರಡುವಿಕೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೋವಿಡ್-19 ಪರಿಶೀಲನಾ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.

ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜ್ವರದ ಸೋಂಕು ಕಾಣಿಸಿಕೊಂಡ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರ ಟೆಸ್ಟ್ ಮಾಡಬೇಕು ಮತ್ತು ಅವರ ಮೇಲೆ ನಿರಂತರ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.

error: Content is protected !! Not allowed copy content from janadhvani.com