janadhvani

Kannada Online News Paper

ಈದುಲ್ ಫಿತರ್ ದಿನ ವಿದ್ಯುತ್ ವ್ಯತ್ಯಯಗೊಳಿಸದಂತೆ ಮೆಸ್ಕಾಂ ಇಲಾಖೆಗೆ ಮನವಿ

ಪುತ್ತೂರು:- ಮೇ 23 ರಂದು ಪುತ್ತೂರು, ಸುಳ್ಯ, ಕಡಬ ತಾಲೂಕಿನ ಹಲವೆಡೆ ಕಾಮಗಾರಿ ಪ್ರಯುಕ್ತ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದೆಂದು ಮೆಸ್ಕಾಂ ಇಲಾಖೆ ಪತ್ರಿಕೆಯಲ್ಲಿ ಪ್ರಕಟನೆ ಹೊರಡಿಸಿತ್ತು. ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತರ್ ಕೂಡ ಅದೇ ದಿನ ಆಗುವುದನ್ನು ಗಮನಿಸಿ ಯಾವುದೇ ಕಾರಣಕ್ಕು ಆ ದಿನ ವಿದ್ಯುತ್ ಪೂರೈಕೆ ಕಡಿತಗೊಳಿಸಬಾರದೆಂದು SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪುತ್ತೂರು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರವರಿಗೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಇಂಜಿನಿಯರ್ ರವರು ವಿದ್ಯುತ್ ಪೂರೈಕೆ ಕಡಿತವನ್ನು ಈದುಲ್ ಫಿತರ್ ಹಬ್ಬವನ್ನು ಗಮನದಲ್ಲಿ ಇಟ್ಟುಕೊಂಡು ಭಾನುವಾರಕ್ಕೆ ಬದಲಾಗಿ ಮಂಗಳವಾರಕ್ಕೆ ಮುಂದೂಡಲಿದ್ದೇವೆ ಎಂದು ಭರವಸೆಯನ್ನು ನೀಡಿರುತ್ತಾರೆ.

ಅದೇ ರೀತಿ ಲಾಕ್ ಡೌನ್ ಸಂದರ್ಭದಲ್ಲಿನ ತಿಂಗಳ ಬಿಲ್ ಹೆಚ್ಚುವರಿಯಾಗಿ ಬಂದದನ್ನು ಇಂಜಿನಿಯರ್ ರವರ ಗಮನಕ್ಕೆ ತಂದಾಗ ,ಇದುವರೆಗೆ ಅಂತಹ ಯಾವುದೇ ಸಮಸ್ಯೆ ಇಲ್ಲಿ ಉದ್ಬವಿಸಿಲ್ಲ,ಒಂದು ವೇಳೆ ಈ ರೀತಿಯ ಸಮಸ್ಯೆಗಳು ಉಂಟಾದರೆ ನೇರವಾಗಿ ನನ್ನನ್ನು ಬೇಟಿಯಾಗಿ ವಿಷಯ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಯಾವುದೇ ಕಾರಣಕ್ಕು ಜನಸಾಮಾನ್ಯರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್,ಉಪಾದ್ಯಕ್ಷರಾದ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು,ನಗರ ಅಧ್ಯಕ್ಷರಾದ ಬಶೀರ್ ಕೂರ್ನಡ್ಕ, ಹಾಗು ಹಿರಿಯ ಮುಖಂಡರಾದ ಮಹಮ್ಮದ್ ಪಿಬಿಕೆ ಮತ್ತು ಉಮ್ಮರ್ ಕೂರ್ನಡ್ಕ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com