ಸೌದಿ ಅರೇಬಿಯಾ: ಏಳು ತಿಂಗಳ ಹಿಂದೆ ಬಸ್ಸಿನಲ್ಲಿ ಉಮ್ರಾ ಯಾತ್ರೆಗೆ ತೆರಳುವಾಗ ಮದೀನಾದಿಂದ 180 ಕಿಲೊ ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿ ವಿವಿಧ ದೇಶಗಳ ಸುಮಾರು 30ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು. ಅದೇ ಬಸ್ಸಿನಲ್ಲಿದ್ದ ಕರ್ನಾಟಕದವರಾದ “ನಾಸಿರ್ ಅಲಿ” ಎಂಬವರು ಸಹ ಮೃತರಾಗಿ,ದೇಹ ಸಂಪೂರ್ಣ ಸುಟ್ಟಹೋದ ಕಾರಣ ಡಿಎನ್ಎ ಪರಿಕ್ಷೆ ಮೂಲಕ ಮೃತರ ಗುರತು ಪತ್ತೆಹಚ್ಚಬೇಕಾಯಿತು.
ಡಿಎನ್ಎ ತಾಳೆಯಾದ ನಂತರ ಅಂತ್ಯಕ್ರಿಯೆ ಪೂರ್ತಿಗೊಳಿಸಲು ಕುಟುಂಬಸ್ತರು ಬರುವ ಸಿದ್ದತೆಯಲ್ಲಿದ್ದರು. ಲಾಕ್ ಡೌನ್ನಿಂದಾಗಿ ವಿಮಾನಯಾನ ಸೇವೆ ಇಲ್ಲದಕಾರಣ ಬರಲು ಸಾಧ್ಯವಾಗದೆ ಮರಣೋತ್ತರ ಕ್ರಿಯೆ ನಿರ್ವಹಿಸಲು, ವಾರಸುದಾರಿಕೆ ತೆಗೆದುಕೊಳ್ಳಲು ಯಾರು ಇಲ್ಲದಾಗ.ಅಪೇಕ್ಷಿಯ ಮೇರೆಗೆ ಕೆ.ಸಿ.ಎಫ್ ಸಾಂತ್ವನ ಕಾರ್ಯಕರ್ತರೊಬ್ಬರ ಹೆಸರಿಗೆ ಕುಟುಂಬಸ್ತರು ದಫನ ಕಾರ್ಯಕ್ಕೆ ಬೇಕಾದ ವಾರಸುದಾರಿಕೆಯ ದಾಖಲೆ ವರ್ಗಾವಣೆ ಮಾಡಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆ ವಿಶೇಷ ಅನುಮತಿ ಪಡೆದು ಸ್ವತಃ ಕೆ.ಸಿ.ಎಫ್ ಸಾಂತ್ವನ ಕಾರ್ಯಕರ್ತರು ಮುಂದೆ ನಿಂತು ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಮದೀನಾದ ಜನ್ನತುಲ್ ಬಖಿಯಿನಲ್ಲಿ ದಫನ ಕಾರ್ಯ ನೆರವೇರಿಸಲಾಗಿದೆ,ಎಂದು ಮದೀನಾ ಮುನವ್ವರ ಝೋನ್ ಸಾಂತ್ವನ ಇಲಾಖೆ ಕನ್ವೀನರ್ ರಝಾಕ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ,















ಇನ್ನಷ್ಟು ಸುದ್ದಿಗಳು
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ