janadhvani

Kannada Online News Paper

ಅನಿವಾಸಿಗಳು ತವರಿಗೆ: ಕೇರಳ ಮುಸ್ಲಿಂ ಜಮಾಅತ್ ನಿಂದ ಸಕಲ ಸಿದ್ಧತೆ

ಕೋಝಿಕ್ಕೋಡ್: ತವರಿಗೆ ಮರಳುವ ಅನಿವಾಸಿಗಳಿಗಳನ್ನು ಬರಮಾಡಿಕೊಳ್ಳಲು ಕೇರಳ ಮುಸ್ಲಿಮ್ ಜಮಾಅತ್ ಮತ್ತು ಅನಿವಾಸಿ ಸಹ ಸಂಸ್ಥೆ ಐಸಿಎಫ್‌ ಸರ್ವ ಸಿದ್ಧತೆಗಳನ್ನು ನಡೆಸಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ. ಇದರ ಭಾಗವಾಗಿ ಸಂಘಟನಾ ನಾಯಕತ್ವವು ರಾಜ್ಯದ ವಿವಿಧ ವಿಭಾಗದ ಮುಖ್ಯಸ್ಥರೊಂದಿಗೆ ಸಂವಹನ ನಡೆಸಿದೆ. ರಾಜ್ಯ ಮಟ್ಟದಲ್ಲಿ, ವಿವಿಧ ದೇಶಗಳ ಐಸಿಎಫ್ ಪ್ರತಿನಿಧಿಗಳನ್ನು ಒಳಪಡಿಸಿ ನಿಯಂತ್ರಣ ಮಂಡಳಿಯನ್ನು ರಚಿಸಲಾಗಿದೆ.

  • ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಹಾಗೂ ಇತರ ರಾಜ್ಯಗಳಿಂದ ಪ್ರವೇಶಗೈಯ್ಯುವ ಕಡೆ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
  • ಅಧಿಕಾರಿಗಳ ನಿರ್ದೇಶನದಂತೆ ಸೇವೆ ಸಲ್ಲಿಸಲು 40 ಆಂಬುಲೆನ್ಸ್‌ಗಳು ಮತ್ತು ಇತರ ಸಂಚಾರ ವಾಹನಗಳನ್ನು ಸಜ್ಜುಗೊಳಿಸಲಾಗುವುದು.
  • ತರಬೇತಿ ಪಡೆದ ಎಸ್‌ವೈಎಸ್ ಸಾಂತ್ವನ ವಿಭಾಗದ ಸ್ವಯಂಸೇವಕರನ್ನು ಪೂರ್ಣ ಸಮಯದ ಸ್ವಯಂಸೇವಕರನ್ನಾಗಿ ನಿಯುಕ್ತಿಗೊಳಿಸಲಾಗುವುದು.
  • ಕ್ವಾರೆಂಟೈನ್‌ಗೆ ಅಗತ್ಯ ಬಂದಲ್ಲಿ ವಿವಿಧ ಸುನ್ನೀ ಸಂಸ್ಥೆಗಳನ್ನು ಬಿಟ್ಟುಕೊಡಲಾಗುವುದು.
  • ಸರಕಾರದ ಕ್ವಾರೆಂಟೈನ್‌ ಕೇಂದ್ರಗಳಿಗೆ ನೆರವು ನೀಡಲಾಗುವುದು.
  • ಮನೆಗಳಲ್ಲಿ ಕ್ವಾರೆಂಟೈನ್‌ ನಲ್ಲಿರುವ ಅನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಮಟ್ಟದ ಸಹಸಂಸ್ಥೆಗಳು ಸರಕಾರಿ ವ್ಯವಸ್ಥೆಗಳಿಗೆ ಬೆಂಬಲ ನೀಡಲಾಗುವುದು.
  • ಭಾರತಕ್ಕೆ ಮರಳಲು ಕಾಯುತ್ತಿರುವ ವಲಸಿಗರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ವಿವಿಧ ದೇಶಗಳಲ್ಲಿನ ಐಸಿಎಫ್ ಸಾರಥಿಗಳು ಶ್ರದ್ಧೆಯಿಂದ ಕೆಲಸ ಮಾಡುಲಿದೆ.

ಐಸಿಎಫ್‌ ಜಿಸಿಸಿ ಕೌನ್ಸಿಲ್ ಅಧ್ಯಕ್ಷ ಸಯ್ಯಿದ್ ಅಬ್ದುರ್ರಹ್ಮಾನ್ ಅಟಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆನ್‌ಲೈನ್ ಸಭೆಯಲ್ಲಿ ಯೋಜನೆಗಳ ಅಂತಿಮ ರೂಪುರೇಶೆಯನ್ನು ನಡೆಸಲಾಗಿದೆ.ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಂಡೂರ್ ಅಬ್ದುರ್ರಹ್ಮಾನ್ ಫೈಝಿ, ಮರಾಯಮಂಗಲಂ ಅಬ್ದುರ್ರಹ್ಮಾನ್ ಫೈಝಿ, ಸಿ.ಪಿ.ಸೈದಲವಿ ಮಾಸ್ಟರ್, ಎನ್ ಅಲಿ ಅಬ್ದುಲ್ಲಾ, ಸೈಯದ್ ತ್ವಾಹಾ ಸಖಾಫಿ, ಮಜೀದ್ ಕಕ್ಕಾಡ್, ಮುಹಮ್ಮದ್ ಪರವೂರ್, ಐಸಿಎಫ್‌ ಜಿಸಿಸಿ ಸಾರಥಿ ಅಝೀಝ್ ಸಖಾಫಿ ಮಂಬಾಡ್, ಶರೀಫ್ ಕಾರಶ್ಸೇರಿ (ಯು.ಎ.ಇ.), ಸೈಯದ್ ಹಬೀಬ್ ಕೋಯ ತಂಙಳ್, ಮುಜೀಬ್ ಎ.ಆರ್. ನಗರ್ (ಸೌದಿ ಅರೇಬಿಯಾ), ನಿಸಾರ್ ಸಖಾಫಿ (ಒಮಾನ್), ಅಲವಿ ಸಖಾಫಿ ತೇಂಜೀರಿ (ಕುವೈತ್), ಕರೀಮ್ ಹಾಜಿ ಮೇಮುಂಡ (ಖತರ್), ಎಂ.ಸಿ.ಕರೀಮ್ ಹಾಜಿ (ಬಹ್‌ರೈನ್) ಮತ್ತು ವಿವಿಧ ಪ್ರತಿನಿಧಿ ನಾಯಕರು ಭಾಗವಹಿದ್ದರು.

error: Content is protected !! Not allowed copy content from janadhvani.com