janadhvani

Kannada Online News Paper

ಯುಎಇ: ತವರಿಗೆ ಮರಳುವ ಕನ್ನಡಿಗರಿಗೆ KNRI ನಲ್ಲಿ ನೋಂದಣೆ ಆರಂಭ

ದುಬೈ: ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ ಕಾರಣ ಯುಎಇ ಯಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರು ಹಾಗೂ ತವರಿಗೆ ಮರಳಲು ಬಯಸುವ ಅನಿವಾಸಿ ಕನ್ನಡಿಗರಿಗೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ NRI ಫೋರಂನ ನೇತೃತ್ವದಲ್ಲಿ ಕನ್ನಡಿಗರಿಗೆ ನೆರವು ನೀಡಲು ಸರ್ಕಾರ ನಿರ್ಧರಿಸಿದ್ದು,ಗರ್ಭಿಣಿಯರು, ನಿರುದ್ಯೋಗಿಗಳು, ವಯಸ್ಕರು, ಅನಾರೋಗ್ಯ ಪೀಡಿತರು ಮುಂತಾದವರಿಗೆ ಮೊದಲ ಆಧ್ಯತೆ ನೀಡಿ ತವರಿಗೆ ಮರಳುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು KNRI ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.

ಇದಕ್ಕಾಗಿ KNRI ಫೋರಂನ www.knriuae.com ವೆಬ್ ಪೋರ್ಟರ್ನಲ್ಲಿ ನೋಂದಾವಣೆ ಮಾಡಿದ್ದಲ್ಲಿ ಅವರ ಮಾಹಿತಿಯನ್ನು ಕರ್ನಾಟಕ ಸರಕಾರಕ್ಕೆ ನೀಡಲಾಗುತ್ತದೆ.

  • ಪಾಸ್ಪೋರ್ಟ್ ಹೆಸರು
  • ಇಮೇಲ್ ಐಡಿ
  • ಲಿಂಗ
  • ಯುಎಇ ಮೊಬೈಲ್ ಸಂಖ್ಯೆ
  • ಕರ್ನಾಟಕ ಮೊಬೈಲ್ ಸಂಖ್ಯೆ
  • ಯಾವ ಎಮಿರೇಟ್
  • ಯುಎಇ ವಿಳಾಸ
  • ಪಾಸ್ಪೋರ್ಟ್ ಸಂಖ್ಯೆ
  • ಯಾತ್ರೆಯ ಕಾರಣ
  • ಕರ್ನಾಟಕದ ಜಿಲ್ಲೆ
  • ಖಾಯಂ ವಿಳಾಸ
  • ಕರ್ನಾಟಕದ ವಿಮಾನ ನಿಲ್ದಾಣ

ಮುಂತಾದವುಗಳನ್ನು ನಮೂದಿಸಿ ನೋಂದಾಯಿಸಬೇಕು.

ಅದೇ ರೀತಿ ಯುಎಇ ಭಾಯತೀಯ ರಾಯಭಾರಿ ಕಚೇರಿ ಆಯೋಜಿಸಿದ ಕೇಂದ್ರ ಸರ್ಕಾರದ www.cgidubai.gov.in ವೆಬ್ಸೈಟ್ ತೆರೆದಾಗ ಕೋವಿಡ್-19 ಪ್ರಯುಕ್ತ ತವರಿಗೆ ತೆರಳುವವರಿಗಾಗಿ ಎಂಬ ದೊಡ್ಡ ಘಾತ್ರದ ಸಂದೇಶ ಪರದೆಯೊಂದನ್ನು ಟಚ್ ಮಾಡುವ ಮೂಲಕ ಅದರಲ್ಲಿ ಕೇಳುವ ಮಾಹಿತಿಯನ್ನು ನೀಡಿ ನೋಂದಾಯಿಸಬೇಕಾಗಿದೆ.

ಗಮನಿಸಿ, ಕರ್ನಾಟಕದ KNRI Forum ಹಾಗೂ ಕೇರಳದ NORKA ದಲ್ಲಿ ನೋಂದಾಯಿಸಿದವರು ರಾಯಭಾರ ಕಚೇರಿಯ ವೆಬ್ ಸೈಟ್ ನಲ್ಲೂ ನೋಂದಾಯಿಸಬೇಕಾಗಿದೆ.

error: Content is protected !! Not allowed copy content from janadhvani.com