janadhvani

Kannada Online News Paper

ಸೌದಿ: ಕರ್ಫ್ಯೂ ಸಡಿಲಿಕೆ ಸಂಭ್ರಮಕ್ಕಲ್ಲ, ಸೋಂಕಿತರಲ್ಲಿ ಹೆಚ್ಚು ವಲಸಿಗರು- ಎಚ್ಚರಿಕೆ

ರಿಯಾದ್,ಏ.30: ಸೌದಿಯಲ್ಲಿ ಇಂದು ಐದು ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಕೋವಿಡ್ ಮರಣ ಸಂಖ್ಯೆ 162ಕ್ಕೆ ತಲುಪಿದೆ.1351 ಮಂದಿಗೆ ಇಂದು ಕೋವಿಡ್ ದೃಢೀಕರಿಸಲಾಗಿದ್ದು, 1130 ಮಂದಿ ವಲಸಿಗರಾಗಿದ್ದಾರೆ.ಇದರೊಂದಿಗೆ ಒಟ್ಟು ರೋಗಿಗಳ ಸಂಖ್ಯೆ 22753 ಕ್ಕೆ ಏರಿದೆ. ಈವರೆಗೆ ಒಟ್ಟು 3163 ಜನರು ಗುಣಮುಖರಾಗಿದ್ದಾರೆ. 123 ಮಂದಿ ಗಂಭೀರ ಸ್ಥಿತಿಯಲ್ಲಿದಾದಾರೆ.

ಮಕ್ಕಾ ಮತ್ತು ಸಂಪೂರ್ಣವಾಗಿ ಐಸೊಲೇಷನ್ ಮಾಡಲಾದ ವಲಯದಲ್ಲಿ ಪ್ರಸಕ್ತ 24 ಗಂಟೆಗಳ ಕರ್ಫ್ಯೂ ಜಾರಿಯಲ್ಲಿದೆ. ದೇಶದ ಉಳಿದ ಭಾಗಗಳಲ್ಲಿ 16 ಗಂಟೆಗಳ ಕರ್ಫ್ಯೂ ನಿಗದಿಪಡಿಸಲಾಗಿದೆ. ಅಂದರೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಎಲ್ಲರಿಗೂ ಮನೆಬಿಟ್ಟು ಹೊರಗಡೆ ತೆರಳಬಹುದಾಗಿದೆ. ಇದರನ್ವಯ, ಎಲ್ಲಾ ವಾಣಿಜ್ಯ ಮತ್ತು ಗುತ್ತಿಗೆ ಕಾರ್ಖಾನೆಗಳು ಕೆಲಸ ಮಾಡಲು ಪ್ರಾರಂಭಿಸಿವೆ.

ಸಂಸ್ಥೆಗಳು ಕಟ್ಟುನಿಟ್ಟಾದ ನಿಬಂಧನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಜನರು ತಮ್ಮ ಉಷ್ಣತೆಯನ್ನು ಪರಿಶೀಲಿಸಬೇಕು, ಕೈಗವಸು ಮತ್ತು ಮುಖವಾಡಗಳನ್ನು ಧರಿಸಬೇಕು. ಸಂಸ್ಥೆಯನ್ನು ಆಗಾಗ ಸೋಂಕುರಹಿತಗೊಳಿಸಬೇಕು. ಉಲ್ಲಂಘನೆಗೈದರೆ, ಕಂಪನಿಗೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ. ಇಂದು ಅನೇಕ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ.

ವಿದೇಶಿಯರು ದೇಶದಲ್ಲಿ ಅತ್ಯಂತ ಜಾಗರೂಕರಾಗಬೇಕಿದೆ. ಪ್ರಸಕ್ತ ರೋಗದಿಂದ ಬಳಲುತ್ತಿರುವ ಹೆಚ್ಚಿನ ಜನರು ವಲಸಿಗರಾಗಿದ್ದಾರೆ. ವಲಸಿಗರು ಬೀದಿಗಳಲ್ಲಿ ಓಡಾಡುತ್ತಿರುವ ಮತ್ತು ಒಟ್ಟುಗೂಡುವ ದೃಶ್ಯಗಳನ್ನು ಸೌದಿ ಮಾಧ್ಯಮ ಬಿಡುಗಡೆ ಮಾಡಿದೆ.

ಇದಕ್ಕಾಗಿ ತಪಾಸಣೆಯನ್ನು ಕಠಿಣಗೊಳಿಸಿ ದಂಡ ವಿಧಿಸಲಾಗುತ್ತದೆ. ಕರ್ಫ್ಯೂ ಇಲ್ಲದಿದ್ದರೂ ಸಹ, ಒಟ್ಟುಗೂಡಿದ ಜನರಿಗೆ 10,000 ರಿಯಾಲ್ ದಂಡ ವಿಧಿಸಲಾಗಿದೆ. ಅನಗತ್ಯವಾಗಿ ಮನೆಬಿಟ್ಟು ಹೊರಗಡೆ ಬಂದವರು ದಂಡ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ ಪರಿಗಣಿಸಲಾಗುವುದಿಲ್ಲ.

error: Content is protected !! Not allowed copy content from janadhvani.com