janadhvani

Kannada Online News Paper

ರಾಜ್ಯ ಮಾಧ್ಯಮ ವಲಯಕ್ಕೆ ಲಗ್ಗೆಯಿಟ್ಟ ಕೊರೋನಾ- ಕ್ಯಾಮರಾಮನ್ ಗೆ ಸೋಂಕು ದೃಢ

ಬೆಂಗಳೂರು: ರಾಜ್ಯದ ಮಾಧ್ಯಮ ಲೋಕಕ್ಕೂ ಕೊರೋನಾ ವೈರಸ್ ವ್ಯಾಪಿಸಿದ್ದು, ನ್ಯೂಸ್ 18 ಕ್ಯಾಮರಾಮನ್ ಗೆ ಸೋಂಕು ದೃಢಪಟ್ಟಿದೆ. ಈತನ ಜತೆ ಸಂಪರ್ಕ ಹೊಂದಿದ್ದ 35 ಕ್ಕೂ ಹೆಚ್ಚು ಪತ್ರಕರ್ತರನ್ನು ಹೋಂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.

ಸೋಂಕಿತ ಕ್ಯಾಮರಾಮ್ಯಾನ್ ಜತೆ ಒಡನಾಟದಲ್ಲಿದ್ದ ನ್ಯೂಸ್‌ 18, ಟಿವಿ 9, ಪಬ್ಲಿಕ್‌ ಟಿವಿ, ಸುವರ್ಣ ಟಿವಿ, ಬಿಟಿವಿ, ದಿಗ್ವಿಜಯ, ಪಬ್ಲಿಕ್ ಟಿವಿಯ ಪತ್ರಕರ್ತರು ಮತ್ತು ಕ್ಯಾಮರಾಮನ್ ಗಳು ಇದೀಗ ಆತಂಕ್ಕೆ ಒಳಗಾಗಿದ್ದಾರೆ. ಸೋಂಕಿತ ಕ್ಯಾಮರಾಮನ್ ಜತೆ 70ಕ್ಕೂ ಹೆಚ್ಚು ಮಂದಿ ಸಂಪರ್ಕದಲ್ಲಿದ್ದು, ಈತನ ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಮಾಡಲಾಗುತ್ತಿದೆ.

ಇನ್ನೂ ಕೆಲವು ವರದಿಗಾರರು, ನಿರೂಪಕರು ಸಹ ಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆಗಳು ದಟ್ಟವಾಗಿವೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಡಿಮೆ. ಬಹುತೇಕ ಮಂದಿ ವರದಿಗಾರರು ಹೊರಗಡೆಯಿಂದ ವರದಿ ಮಾಡಬೇಕಾದ ಅನಿವಾರ್ಯತೆಯಿದೆ. ಈ ಬೆಳವಣಿಗೆ ಸೋಂಕು ವ್ಯಾಪಿಸಲು ಕಾರಣವಾಗಿದೆ.

ಲಾಕ್‌ಡೌನ್‌ ಶುರುವಾದ ಮೇಲೆ ಐಟಿ, ಬಿಟಿಯವರಿಂದ ಹಿಡಿದು ಹಲವರಿಗೆ ವರ್ಕ್‌ ಫ್ರಂ ಹೋಮ್‌ ಫೆಸಿಲಿಟಿ ಸಿಕ್ಕಿದೆ. ಅದೇ ರೀತಿ ತಮಗೂ ಇದೇ ಸೌಲಭ್ಯ ಬೇಕೆಂಬ ಬೇಡಿಕೆಗೆ ವಿದ್ಯುನ್ಮಾಮ ಮಾಧ್ಯಮದಲ್ಲಿ ಅವಕಾಶ ದೊರೆತಿಲ್ಲ. ಕೆಲವು ಮುದ್ರಣ ಮಾಧ್ಯಮ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯ ದೊರೆತಿದೆ.

error: Content is protected !! Not allowed copy content from janadhvani.com