janadhvani

Kannada Online News Paper

ಮಹಾರಾಷ್ಟ್ರದ ಪಾಲ್ಘಾರ್ ಘಟನೆಯನ್ನು ತಿರುಚಿ ಬರೆದು ಮುಖಭಂಗಕ್ಕೀಡಾದ ಸೂಲಿಬೆಲೆ

ಜನಧ್ವನಿ ವರದಿ: ಏಪ್ರಿಲ್ 16 ರಂದು ಮಹಾರಾಷ್ಟ್ರದ ಪಾಲ್ಘಾರ್ ಎಂಬಲ್ಲಿ ನಡೆದ 2 ಸಾಧುಗಳ ಮತ್ತು ಅವರು ಸಂಚರಿಸುತ್ತಿದ್ದ ಕಾರಿನ ಡ್ರೈವರ್ ಸೇರಿ 3 ಮಂದಿಯನ್ನು ಭಯಾನಕ ರೀತಿಯಲ್ಲಿ ಎಳೆದಾಡಿ ಕೊಂದು ಹಾಕಿದ ಅಮಾನವೀಯ ಘಟನೆಯನ್ನು ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಖುದ್ದು ಗೃಹ ಸಚಿವರಾದ ಅನಿಲ್ ದೇಶಮುಖ್ ಇದೊಂದು ಕೋಮು ಆಧಾರಿತ ಘಟನೆಯಲ್ಲ ಬದಲಾಗಿ ಕೊಲೆ ಆರೋಪಿಗಳು ಒಂದೇ ಧರ್ಮದವರಾಗಿದ್ದಾರೆ ಹಾಗೂ ಈ ಸಂಬಂಧ ಒಂಭತ್ತು ಮಂದಿ ಅಪ್ರಾಪ್ತರೂ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ, ಈ ಬಗ್ಗೆ altnews ಪ್ರತ್ಯೇಕ ವರದಿಯನ್ನು ಕೂಡಾ ತಯಾರಿಸಿ ಘಟನೆಯ ಸತ್ಯಾ ಸತ್ಯತೆಯನ್ನು ಬಯಲಿಗೆಳೆದಿದೆ.

ಆದಾಗ್ಯೂ ಈ ಬಗ್ಗೆ ಜನರನ್ನು ರೊಚ್ಚಿಗೆಬ್ಬಿಸಿ ಇಲ್ಲಿನ ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಸದಾ ಸಮಯ ಸನ್ನದ್ಧ ವಾಗಿರುವ ಚಕ್ರವರ್ತಿ ಸೂಲಿಬೆಲೆಯ ಯುವ ತಂಡ ಈ ಘಟನೆಯನ್ನು ಕೂಡಾ ತನಗೆ ಬೇಕಾದ ರೀತಿಯಲ್ಲಿ ತಿರುಚಿ ಆ ಬಗ್ಗೆ ವರದಿಯನ್ನು ತಯಾರಿಸಿ ನೇರವಾಗಿ ಈ ಘಟನೆಗೆ ಕಾರಣ ಕರ್ತರು ಮುಸ್ಲಿಮರು ಎಂದು ಬಿಂಬಿಸಿ ದೊಡ್ಡ ಮಟ್ಟದ ಗಲಭೆಯನ್ನು ಸೃಷ್ಟಿಸಲು ಪ್ರಚೋದನೆಯನ್ನು ಕೂಡಾ ನೀಡಿ ಬಳಿಕ ಸ್ವಯಂ ಮುಖ್ಯ ಮಂತ್ರಿ ಗೃಹ ಸಚಿವರ ಹೇಳಿಕೆ ಹೊರಬಿದ್ದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದ್ದೆ ತಡ ಎಚ್ಚೆತ್ತುಕೊಂಡ ತಂಡ ಬಿರಬಿರನೆ ವರದಿಯನ್ನು ಬದಲಾಯಿಸಿ ಬದಲಾವಣೆ ಮಾಡಿಕೊಂಡು ಮುಖಬಂಗ ಅನುಭವಿಸಿದೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ಕೆಲವು ಯುವ ಪತ್ರಕರ್ತರು ಸುದ್ದಿ ಜಾಲದ ಮೂಲ ವರದಿಯ ಸ್ಕ್ರೀನ್ ಶಾಟ್ ಅನ್ನು ಪಡೆದಿಟ್ಟು ಕೊಂಡು ಇದೀಗ ಸೂಲಿಬೆಲೆಯ ಬೆಲೆ ಯನ್ನು ಪೂರ್ತಿ ತಲೆಕೆಳಗೆ ಮಾಡಿದ್ದು ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿದೆ.

ಎಲ್ಲಿ ಏನು ಗಲಭೆ ನಡೆದರೂ ಅದನ್ನು ಮುಸ್ಲಿಮರ ತಲೆಗೆ ಎತ್ತಿಕಟ್ಟಲು ಪ್ರಯತ್ನ ಮಾಡುವ ಇಂತಹ ವಿಷ ಜಂತುಗಳ ಬಗ್ಗೆ ಗೃಹ ಇಲಾಖೆ ಪ್ರತ್ಯೇಕ ಗಮನ ಹರಿಸಬೇಕಿದ್ದು ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಗೊಳಿಸಿ ಆ ಮೂಲಕ ಬುದ್ಧಿ ಕಲಿಸಬೇಕಾಗಿದೆ. ಇದೆ ಪಾಲ್ಘಾರ್ ಪ್ರಕರಣದ ಬಗ್ಗೆ ಎಡಿಟರ್ಸ್ ಗಿಲ್ಡ್ ಗೆ ರಿಪಬ್ಲಿಕ್ ಟಿವಿ ಯ ಸ್ಥಾಪಕ ಅರ್ನಬ್ ಗೋಸ್ವಾಮಿ ರಾಜೀನಾಮೆ ನೀಡಿರೋದನ್ನು ಕೂಡ ಸ್ಮರಿಸಬಹುದು

ಮಹಾರಾಷ್ಟ್ರದ ಫಾಲ್ಗರ್ ಜಿಲ್ಲೆಯಲ್ಲಿ ನಡೆದ ಮೂವರು ಸಾಧುಗಳ ಕೊಲೆಯನ್ನು ಚಕ್ರವರ್ತಿ ಸೂಲಿಬೆಲೆ ಅನಾಮತ್ತಾಗಿ ಮುಸ್ಲಿಮರ ತಲೆಮೇಲೆ ಕಟ್ಟಿ, ಹಿಂದೂ ಮುಸ್ಲಿಮರ ನಡುವೆ ದ್ವೇಷ, ಗಲಭೆ ಹುಟ್ಟುಹಾಕಲು ಯತ್ನಿಸಿದ್ದಾನೆ. ಇದು ಸಮಾಜಘಾತಕ ಕೆಲಸವಾಗಿದ್ದು, ಈ ಕೂಡಲೇ ಆತನ ಮೇಲೆ ಎಫ್ ಐಆರ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು. ಈತನ ಪ್ರಚೋದನಾಕಾರಿ ಬರೆಹ ಫೇಕ್ ಎಂಬುದಕ್ಕೆ ಎಲ್ಲ ದಾಖಲೆಗಳು ಇಲ್ಲಿವೆ.

ಚಕ್ರವರ್ತಿ ಸೂಲಿಬೆಲೆ ಫೇಕ್ ನ್ಯೂಸ್
http://yuvalive.net/%E0%B2%95%E0%B3%8A%E0%B2%B0%E0%B3%8B%E0%B2%A8%E0%B2%BE-%E0%B2%AE%E0%B3%81%E0%B2%97%E0%B2%BF%E0%B2%A6%E0%B2%AE%E0%B3%87%E0%B2%B2%E0%B3%82-%E0%B2%B9%E0%B3%8B%E0%B2%B0%E0%B2%BE%E0%B2%9F-%E0%B2%AC/?fbclid=IwAR34z62UxcRhq8Os9JheNinl9cq8Wrld4koTxUcaht9XCSo89vbc6mXGs-4

ಉದ್ದವ್ ಠಾಕ್ರೆ ಅಧಿಕೃತ ಸ್ಪಷ್ಟನೆ
https://twitter.com/uddhavthackeray/status/1252163301305397249?s=19

ನ್ಯೂಸ್ ನೇಷನ್ ವರದಿ
https://youtu.be/vrow_fxv4Mw

ದಿ ವೈರ್ ವರದಿ
https://www.google.com/amp/s/m.thewire.in/article/rights/three-men-lynched-in-maharashtra-two-from-nomadic-tribe-bjp-leaders-push-communal-angle/amp

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ
https://indianexpress.com/article/explained/palghar-mob-lynching-mahant-kalpavruksha-giri-6370528/

ದಿ ಹಿಂದೂ ವರದಿ
https://www.thehindu.com/news/national/maharashtra-cm-calls-for-action-against-communal-twist-to-palghar-lynching/article31388090.ece

ಬಲಪಂಥೀಯ ವೆಬ್ ಸೈಟಿನ ವರದಿ https://www.opindia.com/2020/04/maharashtra-palghar-3-people-including-2-sadhus-lynched-110-people-arrested/amp/

ಕೃಪೆ: ಪರ್ಗತ್ ಕೆ ಆರ್ ಫೇಸ್ಬುಕ್ ಪ್ರೊಫೈಲ್

error: Content is protected !! Not allowed copy content from janadhvani.com