janadhvani

Kannada Online News Paper

ಎಸ್ಸೆಸ್ಸೆಫ್ ರಾಜ್ಯ ತನಾಫಸ್ 2020 ಕಾರ್ಯಕ್ರಮಕ್ಕೆ ಪ್ರೌಢ ಸಮಾರೋಪ

ಕೋವಿಡ್-19 ಮಹಾಮಾರಿಯಿಂದ ಭಾರತ ದೇಶ ಸಂಪೂರ್ಣವಾಗಿ ಲಾಕ್‌ಡೌನ ಆಗಿರುವ, ಈ ಸಂದರ್ಭದಲ್ಲಿ ದ‌ಅವಾ ವಿಭಾಗದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಆನ್‌ಲೈನ್‌ನಲ್ಲಿ ವಿನೂತನ ಪ್ರಯೋಗದೊಂದಿಗೆ ತನಾಫುಸ್ 2020 ಎಂಬ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಿತು. ಲಾಕ್‌ಡೌನ್ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ಬೇರೆ ಕಡೆಗೆ ವ್ಯಯ ಮಾಡಿ ವ್ಯರ್ಥ ಮಾಡುವುದನ್ನು ಇದರಿಂದ ತಡೆಯಲು ಸಾಧ್ಯವಾಯಿತು.

ರಾಜ್ಯಾಧ್ಯಕ್ಷರಾದ ಅಸ್ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಾಅತ್, ಕನ್ನಡ ಭಾಷಣ, ಉರ್ದು ಭಾಷಣ ಮತ್ತು ಕನ್ನಡ ಪ್ರೌಢ ಪ್ರಬಂಧ ಸ್ಪರ್ಧೆಗಳು ನಡೆಯಿತು.. ರಾಜ್ಯ ದ‌ಅವಾ ವಿಭಾಗದ ಮೇಲ್ನೋಟದಲ್ಲಿ ನಡೆದ ಸ್ಪರ್ಧೆಗಳನ್ನು ರಾಜ್ಯ ದ‌ಅವಾ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ, ಮುಬಶ್ಶಿರ್ ಅಹ್ಸನಿ, ಆರಿಫ್ ಸಿ.ಅದಿ ಮೇಲ್ನೋಟ ವಹಿಸಿದ್ದರು. ಸ್ಪರ್ಧಾ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ರಾಜ್ಯ ಮೀಡಿಯಾ ವಿಂಗ್‌ನ ಹಕೀಮ್ ಬೆಂಗಳೂರು, ರವೂಫ್ ಮೂಡುಗೋಪಾಡಿ, ಶರೀಫ್ ಕೊಡಗು ಹಾಗೂ ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ನಿರ್ವಹಿಸಿದರು.

ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಅಸ್ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು, ಅಸ್ಸಯ್ಯದ್ ಹಾಮೀಮ್ ತಂಙಳ್ ದುಆಃದೊಂದಿಗೆ ಚಾಲನೆ ನೀಡಿದರು, ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸ್ವಾಗತಿಸಿದರು, ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಸಖಾಫಿ ಉದ್ಘಾಟಿಸಿದರು, ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ|| ಮುಹಮ್ಮದ್ ಫಾರೂಖ್ ನ‌ಈಮಿ, ಕೊಲ್ಲಂ ಫಲಿತಾಂಶ ಪ್ರಕಟ ಮಾಡಿದರು. ಮುಖ್ಯ ತೀರ್ಪುಗಾರರಾಗಿದ್ದ ಜಿ.ಎಮ್ ಮುಹಮ್ಮದ್ ಸಖಾಫಿ ಸ್ಪರ್ಧೆಯ ಕುರಿತು ಅವಲೋಕನ ಭಾಷಣ ಮಾಡಿದರು, ಕೊನೆಯಲ್ಲಿ ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಸಮಾರೋಪ ದುಆಃ ಮತ್ತು ಆಶಿರ್ವಚನ ನೆರವೇರಿಸಿದರು. ಇಸ್ಮಾಯಿಲ್ ಸಖಾಫಿ, ಕೆ.ಎಮ್ ಅಬೂಬಕ್ಕರ್ ಸಿದ್ದೀಕ್, ಹಾಫಿಝ್ ಸುಫೀಯಾನ್ ಸಖಾಫಿ ಸಂದೇಶ ಭಾಷಣ ಮಾಡಿದರು. ಅಶ್ರಫ್ ರಝಾ ಅಮ್ಜದಿ ಕಾರ್ಯಕ್ರಮವನ್ನು,ಕೊನೆಗೆ ವಂದಿಸಿದರು.

error: Content is protected !! Not allowed copy content from janadhvani.com